ತ್ರಿಶೂರ್: ವ್ಯಕ್ತಿಯೋರ್ವ ಬಾಡಿಗೆ ಮನೆಯಲ್ಲಿಯೇ ಅರೆಬೆಂದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಕೇರಳದ ತ್ರಿಶೂರ್ ನಲ್ಲಿ ನಡೆದಿದೆ.
ಬಾಡಿಗೆಯ ಮನೆಯಲ್ಲಿ ಸನ್ನಿ ಎಂಬ ವ್ಯಕ್ತಿ ವಾಸವಾಗಿದ್ದ. ಇದೀಗ ವ್ಯಕ್ತಿಯೊಬ್ಬರ ಶವ ಅದೇ ಮನೆಯಲ್ಲಿ ಅರೆಬೆಂದಸ್ಥಿತಿಯಲ್ಲಿ ಪತ್ತೆಯಾಗಿದ್ದು, ಸನ್ನಿ ಮೃತದೇಹವೇ ಇರಬಹುದು ಎನ್ನಲಾಗಿದೆ. ಕಾರಣ ಸುಟ್ಟ ಸ್ಥಿತಿಯಲ್ಲಿರುವ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ.
ಪೊಲೀಸರ ಪ್ರಕಾರ ಸನ್ನಿ ಅಪರಾಧ ಹಿನ್ನೆಲೆಯುಳ್ಳವನಾಗಿದ್ದು, ಈ ಹಿಂದೆ ಕೊಲೆ ಸೇರಿದಂತೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ. ರೂಮಿನಿಂದ ಹೊಗೆ ಬರುತ್ತಿರುವುದನ್ನು ಗಮನಿಸಿದ ಅಕ್ಕಪಕ್ಕದ ನಿವಾಸಿಗಳು ಕುನ್ನಂಕುಲಂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಗ್ನಿಶಾಮ ಸಿಬ್ಬಂದಿ, ಪೊಲೀಸರು ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಿದ್ದಾರೆ.
ಅಷ್ಟರಲ್ಲೇ ದೇಹದ ಬಹುತೇಕ ಭಾಗ ಸುಟ್ಟು ಹೋಗಿತ್ತು. ಮೃತ ವ್ಯಕ್ತಿ ಯಾರು ಎಂಬುದು ತನಿಖೆ ಬಳಿಕ ತಿಳಿಯಬೇಕಿದೆ.