ಅದೃಷ್ಟ ಅಂದ್ರೆ ಇದೇ ಅಲ್ವಾ ? ಆರೂವರೆ ಕೋಟಿ ರೂ. ಲಾಟರಿ ಗೆದ್ದಾಕೆಗೆ ಡಬ್ಬಲ್‌ ಧಮಾಕಾ

ಕೇವಲ ಎರಡು ತಿಂಗಳ ಹಿಂದೆ $1 ಮಿಲಿಯನ್ ಲಾಟರಿ ಬಹುಮಾನವನ್ನು ಗೆದ್ದ ನಂತರ, ಅಮೆರಿಕದ ಮಹಿಳೆಯೊಬ್ಬಳು ಮತ್ತೊಮ್ಮೆ ಅದೃಷ್ಟವನ್ನು ಪ್ರಯತ್ನಿಸಿದಾಗ ಸ್ಕ್ರ್ಯಾಚ್ ಆಫ್ ಟಿಕೆಟ್‌ಗಳಲ್ಲಿ $2 ಮಿಲಿಯನ್ ಗೆದ್ದಿದ್ದಾಳೆ !

ಉತ್ತರ ಕೆರೊಲಿನಾದ ಶೆಲ್ಬಿಯ ಕೀನ್ಯಾ ಸ್ಲೋನ್ ಎಂಬ 41 ವರ್ಷದ ಮಹಿಳೆ ಫುಡ್ ಮಾರ್ಟ್‌ನಲ್ಲಿದ್ದಾಗ ಮೊದಲ ಬಾರಿಗೆ $20 ಡೈಮಂಡ್ ಡ್ಯಾಜ್ಲರ್ ಟಿಕೆಟ್ ಖರೀದಿಸಿದ್ದಳು. ಆಗ ಆಕೆಗೆ ಒಂದು ಮಿಲಿಯನ್​ ಡಾಲರ್​ ಅಂದರೆ ಸುಮಾರು ಆರೂವರೆ ಕೋಟಿ ರೂಪಾಯಿ ಸಿಕ್ಕಿತ್ತು.

ಈಗ ಮತ್ತೊಮ್ಮೆ ಅದೃಷ್ಟ ಪರೀಕ್ಷಿಸಿದರೆ ಡಬಲ್​ ಗೆದ್ದಿದ್ದಾಳೆ. ನಂಬಲಸಾಧ್ಯವಾದ ಲಾಟರಿ ಬಹುಮಾನದಿಂದ ಖುದ್ದು ಮಹಿಳೆ ದಿಗ್ಭ್ರಮೆಗೊಂಡಿದ್ದಾಳೆ!

“ನಾನು ಶಾಕ್​ನಿಂದ ಮೂಕವಿಸ್ಮಿತಳಾಗಿದ್ದೇನೆ. ನಾನು ಆಶೀರ್ವಾದ ಪಡೆದಿದ್ದೇನೆ. ನಾನು ಹೇಳಬೇಕಾಗಿರುವುದು ಇಷ್ಟೇ” ಎಂದು ಸ್ಲೋನ್ ಹೇಳಿದ್ದಾಳೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read