ತೆಲುಗು, ತಮಿಳು ಹಾಗೂ ಮಲಯಾಳಂ ಚಿತ್ರರಂಗದ ಬೇಡಿಕೆಯ ನಟಿ ಕೀರ್ತಿ ಸುರೇಶ್ ಇಂದು ತಮ್ಮ 31ನೇ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. 2000 ರಲ್ಲಿ ತೆರೆಕಂಡ ಮಲಯಾಳಂನ ‘ಪೈಲಟ್ಸ್’ ಚಿತ್ರದಲ್ಲಿ ಬಾಲನಟಿಯಾಗಿ ಅಭಿನಯಿಸುವ ಮೂಲಕ ತಮ್ಮ ಸಿನಿ ಪಯಣ ಆರಂಭಿಸಿದ ಇವರು 2013 ರಂದು ಮೋಹನ್ ಲಾಲ್ ನಟನೆಯ ‘ಗೀತಾಂಜಲಿ’ ಎಂಬ ಹಾರರ್ ಸಿನಿಮಾದಲ್ಲಿ ಮೊದಲ ಬಾರಿ ನಾಯಕಿಯಾಗಿ ಕಾಣಿಸಿಕೊಂಡರು.
ಮಲಯಾಳಂ ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿದ್ದ ಕೀರ್ತಿ ಸುರೇಶ್ ‘ಇದು ಎನ್ನ ಮಾಯಂ’ ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೂ ಎಂಟ್ರಿ ಕೊಟ್ಟರು. ಬಳಿಕ ದೊಡ್ಡ ದೊಡ್ಡ ಸ್ಟಾರ್ ಗಳೊಂದಿಗೆ. ತೆರೆ ಹಂಚಿಕೊಳ್ಳುವ ಮೂಲಕ ತೆಲುಗು ಹಾಗೂ ತಮಿಳಿನ ಜನಪ್ರಿಯ ನಟಿಯಾಗಿದ್ದಾರೆ.ಇತ್ತೀಚಿಗೆ ಕೀರ್ತಿ ಸುರೇಶ್ ಅವರ ‘ಸೈರನ್’ ‘ರಘು ತಥಾ’ ‘ರಿವಾಲ್ವರ್ ರೀಟಾ’ ಸೇರಿದಂತೆ ʼಕನ್ನಿವೇದಿʼ ಸಿನಿಮಾ ತೆರೆ ಮೇಲೆ ಬರಲು ಸಜ್ಜಾಗಿದೆ.
https://twitter.com/thinkmusicindia/status/1714154783773503628?ref_src=twsrc%5Egoogle%7Ctwcamp%5Eserp%7Ctwgr%5Etweet
https://twitter.com/Aiish_suresh/status/1714140865030140379?ref_src=twsrc%5Egoogle%7Ctwcamp%5Eserp%7Ctwgr%5Etweet
https://twitter.com/telugufilmnagar/status/1714121764807303566?ref_src=twsrc%5Egoogle%7Ctwcamp%5Eserp%7Ctwgr%5Etweet