ʼಲೆಗ್ಗಿಂಗ್ಸ್ʼ​ ಖರೀದಿಸುವಾಗ ಗಮನದಲ್ಲಿರಲಿ ಈ ವಿಷಯ

ಲೆಗ್ಗಿಂಗ್ಸ್‌ ತುಂಬಾ ವರ್ಸಟೈಲ್‌ ಹಾಗೂ ಹೆಚ್ಚಾಗಿ ಬಳಕೆ ಮಾಡುವಂತಹ ಲೋವರ್‌ ಆಗಿದೆ. ಇದನ್ನು ಕುರ್ತಾ, ಟ್ಯೂನಿಕ್‌ ಅಥವಾ ಇತರ ಡ್ರೆಸ್‌ಗಳ ಜೊತೆಗೆ ಧರಿಸಬಹುದು.

ಇದು ಆರ್ಟಿಫಿಶಿಯಲ್‌ ಲೆದರ್‌, ಮ್ಯಾಶ್‌, ಲಾಯ್‌ಕ್ರಾ, ಕಾಟನ್ ಸ್ಪೆಂಡೆಕ್ಸ್‌ ಮೊದಲಾದ ಫ್ಯಾಬ್ರಿಕ್‌ ನಲ್ಲಿ ಲಭ್ಯವಿದೆ. ಇದು ಧರಿಸಲು ತುಂಬಾ ಕಂಫರ್ಟೆಬಲ್‌ ಆಗಿರುವುದರಿಂದ ಎಲ್ಲಾ ರೀತಿಯ ವಯೋಮಾನದವರು ಸಹ ಇದನ್ನು ಧರಿಸುತ್ತಾರೆ. ಆದರೆ ಲೆಗ್ಗಿಂಗ್ಸ್​ನ್ನು ಖರೀದಿಸುವಾಗ ಕೆಲವು ಅಂಶಗಳನ್ನು ಪರಿಗಣಿಸಬೇಕಾಗುತ್ತದೆ. ಇಲ್ಲವಾದರೆ ಲೆಗ್ಗಿಂಗ್ಸ್‌ ನಿಮ್ಮ ದೇಹಕ್ಕೆ ಫಿಟ್‌ ಆಗುವುದಿಲ್ಲ….

ಲೆಗ್ಗಿಂಗ್ಸ್‌ನ ಉದ್ದ ನೋಡಿ : ಲೆಗ್ಗಿಂಗ್ಸ್‌ನ ಉದ್ದ ಹಿಮ್ಮಡಿಗಿಂತ ಮೇಲೆ ಇರಬಾರದು. ಹಾಗಿದ್ದರೆ ಅದು ಶಾರ್ಟ್ಸ್‌ನಂತೆ ಕಾಣುತ್ತದೆ. ನಿಮಗೆ ಪ್ಯಾಂಟ್​ ತುದಿಯಲ್ಲಿ ನೆರಿಗೆಗಳು ಬೇಕಾದರೆ ಲೆಗ್ಗಿಂಗ್ಸ್​ ಉದ್ದ ಹಿಮ್ಮಡಿಗಿಂತ ಕೆಳಗಿರುವಂತೆ ನೋಡಿಕೊಳ್ಳಿ. ಒಮ್ಮೆ ಹಿಮ್ಮಡಿಗಿಂತ ಮೇಲಿದ್ದರೆ ಅದು ಆ್ಯಂಕಲ್​ ಪ್ಯಾಂಟ್​ ಎನಿಸಿಕೊಳ್ಳುತ್ತದೆ.

ಲೆಗ್ಗಿಂಗ್ಸ್‌ನ ಫಿಟ್ಟಿಂಗ್‌ : ಸ್ಕಿನ್ನಿ ಲೆಗ್‌ ಫಿಟ್‌ ಲೆಗ್ಗಿಂಗ್ಸ್‌ ಖರೀದಿ ಮಾಡುವಾಗ ಅದರ ಉದ್ದ ಮತ್ತು ಫಿಟ್ಟಿಂಗ್‌ ಮೇಲೆ ಗಮನ ಇರಲಿ. ಜೊತೆಗೆ ಸ್ಟ್ರೆಚಿಂಗ್‌ ಇರುವ ಫರ್ಮ್ ಲೆಗ್ಗಿಂಗ್ಸ್‌ ಖರೀದಿ ಮಾಡಿ.

ಸರಿಯಾದ ಒಳ ಉಡುಪಿನ ಆಯ್ಕೆ : ಲೆಗ್ಗಿಂಗ್ಸ್‌ ಧರಿಸುವ ವೇಳೆ ನೀವು ಧರಿಸುವ ಒಳ ಉಡುಪಿನ ಮೇಲೂ ಗಮನವಿರಬೇಕು. ಹೆಚ್ಚು ಟೈಟ್‌ ಆದ ಒಳ ಉಡುಪು ಧರಿಸಬೇಡಿ. ಯಾಕೆಂದರೆ ಅದರ ಲೈನ್ ಕಾಣಿಸುತ್ತದೆ. ಇದರಿಂದ ಮುಜುಗರಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚು.

ಆ್ಯಂಕಲ್‌ ಬೂಟ್ಸ್‌ ಅಥವಾ ಸ್ನೀಕರ್ಸ್‌ : ನಿಮ್ಮ ಲೆಗ್ಗಿಂಗ್ಸ್‌ನ್ನು ಸ್ಟೈಲಿಶ್‌ ಮಾಡಲು ಆ್ಯಂಕಲ್‌ ಬೂಟ್ಸ್‌ ಅಥವಾ ಸ್ನೀಕರ್ಸ್‌ ಖರೀದಿ ಮಾಡಿ. ನೀ ಹೈ ಬೂಟ್ಸ್‌ ಕೂಡ ಲೆಗ್ಗಿಂಗ್ಸ್‌ ಜೊತೆ ಚೆನ್ನಾಗಿ ಕಾಣುತ್ತದೆ.

ಪಾಪ್‌ ಕಲರ್‌ ಮತ್ತು ಲೆದರ್‌ ಲೆಗ್ಗಿಂಗ್ಸ್‌ : ಲೆಗ್ಗಿಂಗ್ಸ್‌ ಖರೀದಿ ಮಾಡುವಾಗ ಸ್ಟೈಲಿಶ್‌ ಆದ ನಿಯಾನ್‌ ಬಣ್ಣದ ಅಥವಾ ಪಾಪ್‌ ಕಲರ್‌ ಹಾಗೂ ಲೆದರ್‌ ಲೆಗ್ಗಿಂಗ್ಸ್‌ ಖರೀದಿ ಮಾಡಿ.

ಶಾರ್ಟ್‌ ಟಾಪ್‌ ಧರಿಸಬೇಡಿ : ಲೆಗ್ಗಿಂಗ್ಸ್‌ ಜೊತೆ ಶಾರ್ಟ್‌ ಟಾಪ್‌ ಧರಿಸಬೇಡಿ. ಇದರಿಂದ ನಿಮ್ಮ ಲುಕ್ ಹಾಳಾಗುತ್ತದೆ. ಲೆಗ್ಗಿಂಗ್ಸ್‌ ಜೊತೆಗೆ ಟ್ಯೂನಿಕ್‌ ಅಥವಾ ಲಾಂಗ್‌ ಶರ್ಟ್‌ ಕ್ಯಾರಿ ಮಾಡಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read