ಮೇಕಪ್ ಮಾಡುವಾಗ ಈ ವಿಷಯಗಳ ಬಗ್ಗೆ ಗಮನವಿರಲಿ

ದೈನಂದಿನ ಜೀವನದಲ್ಲಿ ನಿಮ್ಮ ಚರ್ಮದ ಆರೈಕೆ ಮಾಡಿಕೊಳ್ಳುವುದು ಬಹು ಮುಖ್ಯ. ಕಚೇರಿಗೆ ಹೋಗುವವರಾಗಿರಲಿ, ಕಾಲೇಜ್ ಹುಡುಗಿಯರಾಗಿರಲಿ ಇಲ್ಲ ಗೃಹಿಣಿಯಾಗಿರಲಿ. ಸುಂದರ ಮುಖ ಎಲ್ಲರನ್ನೂ ಸೆಳೆಯುತ್ತದೆ. ಹೊಳೆಯುವ ಹಾಗೂ ಸುಂದರ ಮುಖಕ್ಕಾಗಿ ಅನೇಕರು ಮೇಕಪ್ ಮಾಡಿಕೊಳ್ತಾರೆ. ಮೇಕಪ್ ಮಾಡಿಕೊಳ್ಳುವುದ ತಪ್ಪೇನಲ್ಲ. ಆದ್ರೆ ಮೇಕಪ್ ಮಾಡಿಕೊಳ್ಳುವ ವೇಳೆ ಕೆಲವೊಂದು ವಿಷಯದ ಬಗ್ಗೆ ಗಮನ ನೀಡಬೇಕಾಗುತ್ತದೆ.

ಪೌಡರ್ ಹಚ್ಚಿಕೊಳ್ಳುವುದರಿಂದ ಮುಖ ಮತ್ತಷ್ಟು ಕಾಂತಿ ಪಡೆಯತ್ತದೆ. ಆದ್ರೆ ಮುಖದ ಎಲ್ಲ ಭಾಗಕ್ಕೂ ಸರಿಯಾದ ಪ್ರಮಾಣದಲ್ಲಿ  ಪೌಡರ್ ಹಚ್ಚಿಕೊಳ್ಳುಬೇಕಾಗುತ್ತದೆ.

ಕಣ್ಣಿಗೆ ಹಚ್ಚುವ ಕಾಡಿಗೆ ಹಾಗೂ ಮಸ್ಕರಾ ಕಣ್ಣಿನ ಸೌಂದರ್ಯವನ್ನು ಇನ್ನಷ್ಟು ಹೆಚ್ಚು ಮಾಡುವ ಜೊತೆಗೆ ತುಂಬಾ ಹೊತ್ತು ಇರುತ್ತದೆ. ಆದ್ರೆ ಅದನ್ನು ಎಷ್ಟು ಪ್ರಮಾಣದಲ್ಲಿ ಹಚ್ಚಿಕೊಳ್ಳಬೇಕೆಂಬುದರ ಬಗ್ಗೆ ಗಮನ ನೀಡಬೇಕಾಗುತ್ತದೆ. ಜೊತೆಗೆ ಕಾಡಿಗೆ ಕೆಳಗಿಳಿಯದಂತೆ ನೋಡಿಕೊಳ್ಳುತ್ತಿರಬೇಕಾಗುತ್ತದೆ.

ಐ ಬ್ರೋ ಮಾಡುವ ಬದಲು ಒಂದೇ ಥ್ರೆಡ್ ಬಳಸುವುದು ಒಳ್ಳೆಯದು.

ಮೇಕಪ್ ಮಾಡುವಾಗ ಬ್ರೆಷ್ ಬಳಸುವುದು ಒಳ್ಳೆಯದು. ಹಾಗೆ ಮುಖಕ್ಕೆ ಹೊಂದುವ ಸರಿಯಾದ ಬಣ್ಣವನ್ನು ಆಯ್ಕೆ ಮಾಡಿಕೊಳ್ಳುವುದು ಕೂಡ ಮಹತ್ವ ಪಡೆಯುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read