ಬೇರೆಯವರ ಕಣ್ಣು ತಪ್ಪಿಸಿ ಕಪಾಟಿನಲ್ಲಿ ಇವುಗಳನ್ನು ಇಟ್ಟು ಚಮತ್ಕಾರ ನೋಡಿ

ಪ್ರತಿಯೊಬ್ಬರೂ ಒಂದಿಷ್ಟು ಕನಸುಗಳನ್ನು ಕಾಣ್ತಾರೆ. ಕನಸನ್ನು ನನಸು ಮಾಡಲು ಸಾಕಷ್ಟು ಪ್ರಯತ್ನಗಳನ್ನು ನಡೆಸ್ತಾರೆ. ಕಂಡ ಕನಸೆಲ್ಲ ಈಡೇರಲು ಸಾಧ್ಯವಿಲ್ಲ. ಅದಕ್ಕೆ ಅಗತ್ಯವಿರುವ ಹಣ ನಮ್ಮ ಬಳಿಯಿರುವುದಿಲ್ಲ. ಜ್ಯೋತಿಷ್ಯ ಶಾಸ್ತ್ರದಲ್ಲಿ ಆರ್ಥಿಕ ವೃದ್ಧಿ ಮಾಡಿಕೊಂಡು ಕನಸುಗಳನ್ನು ಈಡೇರಿಸಿಕೊಳ್ಳುವುದು ಹೇಗೆ ಎಂಬುದನ್ನು ಹೇಳಲಾಗಿದೆ.

ಶಾಸ್ತ್ರದ ಪ್ರಕಾರ, ಒಂದು ಅಶ್ವತ್ಥ ಎಲೆಯನ್ನು ತೆಗೆದುಕೊಂಡು ಅದ್ರ ಮೇಲೆ ‘ಓಂ’ ಎಂದು ಬರೆಯಿರಿ. ಎಲೆಗೆ ಮೊದಲು ದೇಸಿ ತುಪ್ಪ ಹಾಗೂ ಅರಿಶಿನ ಹಾಕಿ. ಅದ್ರ ಮೇಲೆ ‘ಓಂ’ ಎಂದು ಬರೆಯಬೇಕು. ಇದನ್ನು ಹಣವಿಡುವ ಕಪಾಟಿನಲ್ಲಿಟ್ಟು, ಚಮತ್ಕಾರ ನೋಡಿ.

ವೀಳ್ಯದೆಲೆ ಆರ್ಥಿಕ ವೃದ್ಧಿ ಮಾಡುತ್ತದೆ. ಮನೆಯಲ್ಲಿ ಹಣವಿರಿಸುವ ಕಪಾಟಿನಲ್ಲಿ ವೀಳ್ಯದೆಲೆಯನ್ನು ಇಡಬೇಕು. ಎಲ್ಲರ ಕಣ್ಣು ತಪ್ಪಿಸಿ ಗುಪ್ತವಾಗಿ ವೀಳ್ಯದೆಲೆಯನ್ನು ಇಡಬೇಕು. ಈ ಉಪಾಯವನ್ನು ಸತತ 5 ಶನಿವಾರಗಳ ಕಾಲ ಮಾಡಬೇಕು.

ಕಚೇರಿಯ ಹಣವಿಡುವ ಸ್ಥಳದಲ್ಲಿ ತೆಂಗಿನಕಾಯಿಯನ್ನು ಕೆಂಪು ಬಟ್ಟೆಯಲ್ಲಿ ಕಟ್ಟಿ ಇಡಬೇಕು. ಇದು ಧನ ಲಾಭಕ್ಕೆ ಕಾರಣವಾಗುತ್ತದೆ.

ಶುಕ್ರವಾರದ ದಿನ ಹಳದಿ ಬಟ್ಟೆಯಲ್ಲಿ ಕೇಸರಿ, ಐದು ಬೆಳ್ಳಿ ನಾಣ್ಯಗಳನ್ನು ಕಟ್ಟಿ ಕಪಾಟಿನಲ್ಲಿಡಬೇಕು. ಇದ್ರಿಂದ ಯಶಸ್ಸು ಪ್ರಾಪ್ತಿಯಾಗಿ ಧನಲಾಭವಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read