ಮಕ್ಕಳ ಶುಭ ಫಲಕ್ಕಾಗಿ ಮನೆಯ ಪೂರ್ವ ದಿಕ್ಕಿನಲ್ಲಿ ಈ ಬಣ್ಣದ ವಸ್ತುಗಳನ್ನಿಡಿ

ಮನೆಯ ನೆಮ್ಮದಿಗೆ ವಾಸ್ತು ಶಾಸ್ತ ಅತ್ಯಗತ್ಯ. ಮನೆಯ ಮೂಲೆ ಮೂಲೆಯಲ್ಲಿಡುವ ವಸ್ತುಗಳನ್ನು ವಾಸ್ತು ಪ್ರಕಾರ ಜೋಡಿಸಿದರೆ ಅದರಿಂದ ಉತ್ತಮ ಫಲ ದೊರೆಯುತ್ತದೆ. ಹಾಗಾಗಿ ಮನೆಯ ಪೂರ್ವ ದಿಕ್ಕಿನಲ್ಲಿ ಈ ಬಣ್ಣದ ವಸ್ತುಗಳನ್ನು ಇಟ್ಟರೆ ತುಂಬಾ ಒಳ್ಳೆಯದು ಎನ್ನಲಾಗುತ್ತದೆ.

ವಾಸ್ತು ಶಾಸ್ತ್ರದ ಪ್ರಕಾರ ಪೂರ್ವ ದಿಕ್ಕಿನಲ್ಲಿ ಹಸಿರು ಬಣ್ಣದ ವಸ್ತುಗಳನ್ನು ಇಟ್ಟರೆ ಉತ್ತಮ ಎನ್ನಲಾಗುತ್ತದೆ. ಹಸಿರು ಬಣ್ಣದ ವಸ್ತುಗಳನ್ನು ಪೂರ್ವ ದಿಕ್ಕಿನಲ್ಲಿ ಜೋಡಿಸಿದರೆ ಕುಟುಂಬದ ಹಿರಿಯ ಮಗನ ಜೀವನವು ಉತ್ತಮವಾಗಿರುತ್ತದೆ. ಅವನ ಪ್ರಗತಿಯ ಹಾದಿಯಲ್ಲಿ ಯಾವುದೇ ಸಮಸ್ಯೆ ಎದುರಾಗುವುದಿಲ್ಲ.

ಪೂರ್ವ ದಿಕ್ಕು ಮರದ ಬೆಳವಣೆಗೆಗೆ ಸಹಕಾರಿಯಾಗುವುದರಿಂದ ಮನೆಯ ಪೂರ್ವ ದಿಕ್ಕಿನಲ್ಲಿ ಮರಗಳನ್ನು ಬೆಳೆಸಿದರೆ ಮನೆಗೆ ಒಳ್ಳೆಯದಾಗುವುದು. ಮತ್ತು ಮರದಿಂದ ಮಾಡಿದ ವಸ್ತುಗಳನ್ನು ಕೂಡ ಪೂರ್ವ ದಿಕ್ಕಿನಲ್ಲಿಟ್ಟರೆ ಶುಭವಾಗಲಿದೆ ಎನ್ನಲಾಗಿದೆ.

ಹಾಗೇ ಮನೆಯ ಹಿರಿಯ ಮಗ ಮರಕ್ಕೆ ಸಂಬಂಧಪಟ್ಟ ಯಾವುದೇ ಕೆಲಸಕ್ಕೆ ಕೈಹಾಕಿದರೂ ಯಶಸ್ಸು ಸಿಗುತ್ತದೆ ಎಂದು ಪಂಡಿತರು ಹೇಳುತ್ತಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read