KEA ಪರೀಕ್ಷೆ ಅಕ್ರಮ: FDA ಸೇರಿ 7 ಮಂದಿ ಅರೆಸ್ಟ್

ಯಾದಗಿರಿ: ಯಾದಗಿರಿಯಲ್ಲಿ ಅಕ್ಟೋಬರ್ 28ರಂದು ನಡೆದ ಕೆಇಎ ಪರೀಕ್ಷೆಯಲ್ಲಿ ಆಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ 7 ಜನ ಆರೋಪಿಗಳನ್ನು ಯಾದಗಿರಿ ಪೊಲೀಸರು ಬಂಧಿಸಿದ್ದಾರೆ.

ಓಂಕಾರ್, ನಾಮಕಾರ್, ಪ್ರಭುಲಿಂಗ, ರಾಹುಲ್, ಖಾಜಾಸಾಬ್, ಶ್ರೀಶೈಲ, ಬಸವರಾಜ ಬಂಧಿತ ಆರೋಪಿಗಳು. ಪರೀಕ್ಷೆಯಲ್ಲಿ ಅಕ್ರಮದಲ್ಲಿ ಭಾಗಿಯಾಗಿದ್ದ ಇಬ್ಬರು ಹಾಗೂ ಹೊರಗಿನಿಂದ ಉತ್ತರ ಹೇಳುತ್ತಿದ್ದ ಐದು ಜನರನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಓಂಕಾರ್ ಮತ್ತು ನಾಮಕಾರ್ ಸಹೋದರರಾಗಿದ್ದಾರೆ. ಪರೀಕ್ಷೆ ಬರೆಯುತ್ತಿದ್ದ ಓಂಕಾರನಿಗೆ ಸಹಾಯ ಮಾಡಲು ಬಂದಿದ್ದ ವಡಗೇರಾ ಖಜಾನೆ ಇಲಾಖೆ ಎಫ್.ಡಿ.ಎ. ಬಸವರಾಜ್ ನನ್ನು ಬಂಧಿಸಲಾಗಿದೆ.

ಪರೀಕ್ಷೆ ಬರೆಯುತ್ತಿದ್ದವರಿಗೆ ಸಹಕಾರ ನೀಡುತ್ತಿದ್ದ ಈತ ಪಿಎಸ್ಐ ನೇಮಕಾತಿ ಆಕ್ರಮ ಪ್ರಕರಣದ ಕಿಂಗ್ ಪಿನ್ ಆರ್.ಡಿ. ಪಾಟೀಲನ ಸ್ವಗ್ರಾಮ ಸೊನ್ನಾ ನಿವಾಸಿಯಾಗಿದ್ದಾನೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read