BIG NEWS: ಇಂಜಿನಿಯರಿಂಗ್ ಪ್ರವೇಶಕ್ಕೆ DCET ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವತಿಯಿಂದ DCET ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ ಮಾಡಲಾಗಿದೆ.

ಅಭ್ಯರ್ಥಿಗಳ ಮನವಿ ಮೇರೆಗೆ 2024ನೇ ಸಾಲಿನ ಎರಡನೇ ವರ್ಷದ/ ಮೂರನೇ ಸೆಮಿಸ್ಟರ್ ನ ಇಂಜಿನಿಯರಿಂಗ್ ಕೋರ್ಸ್ ಗಳ ಪ್ರವೇಶಕ್ಕೆ ಡಿಸಿಇಟಿ -2024ಕ್ಕೆ ಅರ್ಜಿ ಸಲ್ಲಿಸಲು ಮತ್ತೊಮ್ಮೆ ಅವಕಾಶ ನೀಡಿ ದಿನಾಂಕ ವಿಸ್ತರಿಸಲಾಗಿದೆ.

ಇದುವರೆಗೆ ನೋಂದಣಿ ಮಾಡದೆ ಇರುವ ಅರ್ಹ ಡಿಪ್ಲೋಮಾ ಅಭ್ಯರ್ಥಿಗಳು ಮೇ 20ರ ಬೆಳಿಗ್ಗೆ 11 ಗಂಟೆಯಿಂದ 23ರ ರಾತ್ರಿ 11:59ರ ವರೆಗೆ ನೋಂದಣಿ ಮಾಡಿಸಿ ಅರ್ಜಿಯನ್ನು ಆನ್ಲೈನ್ ಮೂಲಕ ಸಲ್ಲಿಸಿ ಮೇ 24ರ ಒಳಗೆ ಶುಲ್ಕವನ್ನು ಪಾವತಿಸಬಹುದು.

ಹೆಚ್ಚಿನ ವಿವರಗಳಿಗಾಗಿ ಪ್ರಾಧಿಕಾರದ ವೆಬ್ಸೈಟ್ https://kea.kar.nic.in ಗಮನಿಸಬಹುದಾಗಿದೆ. ನೋಂದಣಿ ಮಾಡಲು ಮತ್ತೊಮ್ಮೆ ದಿನಾಂಕವನ್ನು ವಿಸ್ತರಿಸುವುದಿಲ್ಲ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕರು ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read