ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ: ಇನ್ನು ‘ಸಿಇಟಿ’ ಅರ್ಜಿ ದೃಢೀಕರಣಕ್ಕೆ ‘ಆಧಾರ್’ ಬಳಕೆ

ಬೆಂಗಳೂರು: ಇಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕೆ ನಡೆಸಲಾಗುವ ಸಾಮಾನ್ಯ ಪ್ರವೇಶ ಪರೀಕ್ಷೆ(CET)ಗೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳ ದೃಢೀಕರಣಕ್ಕೆ ಆಧಾರ್ ಬಳಕೆ ಮಾಡಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ(KEA) ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ(UIDAI) ಅನುಮತಿ ನೀಡಿದೆ.

ಸೀಟ್ ಬ್ಲಾಕಿಂಗ್ ದಂಧೆಗೆ ಕಡಿವಾಣ ಹಾಕುವ ಉದ್ದೇಶದಿಂದ ಅನೇಕ ಬಾರಿ ಸುಧಾರಣಾ ಕ್ರಮವನ್ನು ಕೆಇಎ ಕೈಗೊಂಡಿದೆ. ಒಂದು ಮೊಬೈಲ್ ಸಂಖ್ಯೆಯಿಂದ ಒಟಿಪಿ ಬಳಸಿಕೊಂಡು ಒಂದು ಅರ್ಜಿ ಸಲ್ಲಿಸುವುದು. ಮುಖ ಚಹರೆ ದಾಖಲಿಸುವುದು ಕಡ್ಡಾಯ ಮಾಡಲಾಗಿತ್ತು. ಇದೀಗ ಅಭ್ಯರ್ಥಿಗಳ ಆಧಾರ್ ದೃಢೀಕರಣಕ್ಕೆ ಅನುಮತಿ ಪಡೆದುಕೊಂಡಿದೆ.

ವಿದ್ಯಾರ್ಥಿಗಳು ಅರ್ಜಿ ಜೊತೆಗೆ ಆಧಾರ್ ಸಲ್ಲಿಕೆ ಕಡ್ಡಾಯವಲ್ಲ. ಆದರೆ, ಮೊಬೈಲ್ ಸಂಖ್ಯೆ ಇರುವ ಆಧಾರ್ ನಲ್ಲಿ ಸಲ್ಲಿಸಿದಲ್ಲಿ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗುತ್ತದೆ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ತಿಳಿಸಿದ್ದಾರೆ.

ಜನವರಿ 23 ರಿಂದ 2025 ನೇ ಸಾಲಿನ ಸಿಇಟಿ ಅರ್ಜಿ ಸಲ್ಲಿಕೆ ಆರಂಭವಾಗಿದೆ. ಈಗಾಗಲೇ 42,574 ಅರ್ಜಿಗಳು ಸಲ್ಲಿಕೆಯಾಗಿದೆ. ಸೈಬರ್ ಕೇಂದ್ರಗಳ ಮೇಲೆ ವಿದ್ಯಾರ್ಥಿಗಳ ಅವಲಂಬನೆ ಕಡಿಮೆ ಮಾಡಲು ಗ್ರಾಮ ಒನ್ ಕೇಂದ್ರಗಳ ಕಂಪ್ಯೂಟರ್ ನಿರ್ವಾಹಕರಿಗೆ ತರಬೇತಿ ಕೂಡ ನೀಡಲಾಗಿದೆ.

ಪ್ರವೇಶ ವಂಚನೆ ಮತ್ತು ಸೀಟು ನಿರ್ಬಂಧಿಸುವಿಕೆಯನ್ನು ತಡೆಗಟ್ಟಲು, ಕೆಸಿಇಟಿ 2025 ಆಧಾರ್ ಪರಿಶೀಲನೆ ಮತ್ತು ಮುಖ ಗುರುತಿಸುವಿಕೆಯನ್ನು ಬಳಸಿಕೊಂಡು ಎರಡು ಹಂತದ ದೃಢೀಕರಣವನ್ನು ಜಾರಿಗೆ ತರುತ್ತದೆ. ಗ್ರಾಮ ಒನ್ ಕೇಂದ್ರಗಳು ಗ್ರಾಮೀಣ ವಿದ್ಯಾರ್ಥಿಗಳಿಗೆ ಸಹಾಯ ಮಾಡುತ್ತವೆ ಎಂದು ಹೇಳಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read