ಕಾವೇರಿ ತೀರ್ಥೋದ್ಭವ; ತೀರ್ಥ ಸ್ವರೂಪಿಣಿ ಕಾವೇರಿ ಮಾತೆಯ ಕಣ್ತುಂಬಿಕೊಂಡ ಸಹಸ್ರ ಭಕ್ತಗಣ

ಮಡಿಕೇರಿ :  ಜೀವನದಿ ಕಾವೇರಿಯ ಉಗಮಸ್ಥಾನ ಕೊಡಗು ಜಿಲ್ಲೆಯ ತಲಕಾವೇರಿಯಲ್ಲಿ ಮಧ್ಯರಾತ್ರಿ 1.27ರ ಕರ್ಕಾಟಕ ಲಗ್ನದಲ್ಲಿ ತೀರ್ಥೋದ್ಭವ ನಡೆದಿದೆ.

ಕಾವೇರಿ ತೀರ್ಥೋಬ್ದವದ ವೇಳೆ ಹಬ್ಬದ ವಾತಾವರಣ ಮನೆಮಾಡಿತ್ತು. ವರ್ಷಕ್ಕೊಮ್ಮೆ ತೀರ್ಥ ಸ್ವರೂಪಿಣಿಯಾಗಿ ಭಕ್ತರಿಗೆ ದರ್ಶನ ನೀಡುವ ಕಾವೇರಿಯನ್ನು ಕಣ್ತುಂಬಿಕೊಳ್ಳಲು ಸಹಸ್ರ ಸಂಖ್ಯೆಯ ಭಕ್ತರ ದಂಡು ನೆರೆದಿತ್ತು. ರಾತ್ರಿ 1.27 ರ ಸುಮಾರಿಗೆ ಕಾವೇರಿ ತೀರ್ಥೋಬ್ಬವ ನಡೆದಿದೆ.

ಇಂದು ರಾತ್ರಿ 1 ಗಂಟೆ 27 ನಿಮಿಷಕ್ಕೆ ಕರ್ಕಾಟಕ ಲಗ್ನ ತುಲಾ ಸಂಕ್ರಮಣ ಪುಣ್ಯ ಕಾಲದಲ್ಲಿ ಕಾವೇರಿ ತೀರ್ಥೋದ್ಭವವಾಗಿದೆ. ಈ ಪವಿತ್ರ ಕ್ಷಣವನ್ನು ಸಾವಿರಾರು ಭಕ್ತರು ಕಣ್ತುಂಬಿಕೊಂಡಿದ್ದು, ಅರ್ಚಕರು ಭಕ್ತರ ಮೇಲೆ ಕಾವೇರಿ ನೀರನ್ನು ಎರಚಿದ್ದು, ಕಾವೇರಿ ಮಾತೆಯ ಪ್ರೋಕ್ಷಣೆಯಿಂದ ಭಕ್ತರು ಪುನೀತರಾಗಿದ್ದಾರೆ.

ವರ್ಷಕ್ಕೊಮ್ಮೆ ತೀರ್ಥಸ್ವರೂಪಿಣಿಯಾಗಿ ಉಕ್ಕಿಬರುವ ಪುಣ್ಯಕಾಲ ಕರ್ಕಾಟಕ ಲಗ್ನದಲ್ಲಿ ತೀರ್ಥೋದ್ಭವವನ್ನು ಕಣ್ತುಂಬಿಕೊಳ್ಳಲು ಸಹಸ್ರ ಸಂಖ್ಯೆಯ ಭಕ್ತರು ಜಮಾಯಿಸಿದ್ದರು. ರಾತ್ರಿ 1.27 ರ ಸುಮಾರಿಗೆ ಬ್ರಹ್ಮಕುಂಡಿಕೆಯಿಂದ ತೀರ್ಥಸ್ವರೂಪಿಣಿಯಾಗಿ ಉಕ್ಕಿಬಂದ ಕಾವೇರಿಯನ್ನು ಭಕ್ತರ ಕಣ್ತುಂಬಿಕೊಂಡು ಹರ್ಷದ್ಘಾರದ ಮೂಲಕ ಕಲ್ಯಾಣಿಯಲ್ಲಿ ಮಿಂದೆದ್ದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read