Kaun banega crorepati : ಮಹಾಭಾರತದ ಈ ಪ್ರಶ್ನೆಗೆ ಉತ್ತರ ನೀಡಲಾಗದೆ 25 ಲಕ್ಷ ರೂ. ಕಳೆದುಕೊಂಡ ಬೆಂಗಳೂರು ಸ್ಪರ್ಧಿ….!

ಕೌನ್ ಬನೇಗಾ ಕರೋಡ್ಪತಿಯ ಹದಿನಾರನೇ ಸೀಸನ್ ಸೋಮವಾರ  ಆಗಸ್ಟ್ 12 ರಂದು ಶುರುವಾಗಿದೆ. ನಿರೂಪಕ, ನಟ ಅಮಿತಾಬ್ ಬಚ್ಚನ್ ಅವರ ಭಾವನಾತ್ಮಕ ಭಾಷಣದೊಂದಿಗೆ ಶೋ ಆರಂಭವಾಗಿದೆ.

ಬಿಗ್‌ ಬಿ ಅಮಿತಾಬ್‌ ಬಚ್ಚನ್‌, ತಮ್ಮ ಮಾತಿನ ನಂತ್ರ ಸ್ಪರ್ಧಿಗಳನ್ನು ಪರಿಚಯಿಸಿದರು ಮತ್ತು ಫಾಸ್ಟೆಸ್ಟ್ ಫಿಂಗರ್ ಫಸ್ಟ್ ಸುತ್ತನ್ನು ಆಡಿಸಿದ್ರು. ಆ ನಂತ್ರ ಹಾಟ್‌ ಸೀಟ್‌ ಗೆ ಬಂದವರು ಬೆಂಗಳೂರನ ಉತ್ಕರ್ಷ್ ಬಾಕ್ಸಿ.  ಮಾನವ ಸಂಪನ್ಮೂಲ ವೃತ್ತಿಪರರಾದ ಉತ್ಕರ್ಷ್ ಅವರು ಕೌನ್‌ ಬನೇಗಾ ಕರೋಡ್ಪತಿ ಪ್ರಶ್ನೆಗಳಿಗೆ ಚೆನ್ನಾಗಿ ಉತ್ತರ ನೀಡುತ್ತಿದ್ದರು. ಆದ್ರೆ 25 ಲಕ್ಷ ರೂಪಾಯಿ ಪ್ರಶ್ನೆಗೆ ಉತ್ತರ ನೀಡಲು ಸಾಧ್ಯವಾಗ್ಲಿಲ್ಲ. ಇದು ಮಹಾಭಾರತಕ್ಕೆ ಸಂಬಂಧಿಸಿದ ಪ್ರಶ್ನೆಯಾಗಿತ್ತು.

ಮಹಾಭಾರತದ ಪ್ರಕಾರ, ಯಾವ ದೇವರು ಅಂಬಾಗೆ ಮಾಲೆಯನ್ನು ಉಡುಗೊರೆಯಾಗಿ ಕೊಟ್ಟನು, ಯಾರು ಅದನ್ನು ಧರಿಸುತ್ತಾರೋ ಅವರು ಭೀಷ್ಮನನ್ನು ಕೊಲ್ಲುವ ವ್ಯಕ್ತಿಯಾಗುತ್ತಾರೆ ? ಎಂಬ ಪ್ರಶ್ನೆ ಕೇಳಲಾಗಿತ್ತು. ಭಗವಾನ್ ಶಿವ, ಭಗವಾನ್ ಕಾರ್ತಿಕೇಯ, ಭಗವಾನ್ ವಿಷ್ಣು ಮತ್ತು ಭಗವಾನ್ ವಾಯು ಎಂದು ಆಯ್ಕೆಗಳನ್ನು ನೀಡಲಾಗಿತ್ತು.

ಉತ್ಕರ್ಷ್  ವಿಡಿಯೋ ಕಾಲ್ ಎ ಫ್ರೆಂಡ್ ಲೈಫ್‌ಲೈನ್‌ನ ಸಹಾಯವನ್ನು ಪಡೆದರು. ಆದ್ರೂ ಸ್ಪಷ್ಟ ಉತ್ತರ ಸಿಗದ ಅವರು ಡಬಲ್‌ ಡಿಪ್‌ ಬಳಸಿದ್ದರು. ಆ ನಂತ್ರವೂ ತಪ್ಪು ಉತ್ತರ ನೀಡಿದ ಕಾರಣ 6 ಲಕ್ಷ 40 ಸಾವಿರ ತೆಗೆದುಕೊಂಡು ಮನೆಗೆ ಬರುವಂತಾಯ್ತು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read