ಸಹೋದರನಿಗೆ ʼವಾಸ್ತುʼ ಅನುಸಾರ ಕಟ್ಟಿ ರಾಖಿ

ಸಹೋದರ-ಸಹೋದರಿಯರ ಪ್ರೀತಿಯ ಹಬ್ಬ ರಕ್ಷಾ ಬಂಧನ. ಆಗಸ್ಟ್ 19 ರಂದು ಈ ಬಾರಿ ರಕ್ಷಾ ಬಂಧನವನ್ನು ಆಚರಿಸಲಾಗ್ತಿದೆ. ಸಹೋದರನ ಕೈಗೆ ರಕ್ಷಾ ದಾರವನ್ನು ಕಟ್ಟಿ, ಆತನ ಸಂತೋಷಕ್ಕೆ ಸಹೋದರಿಯರು ಪ್ರಾರ್ಥನೆ ಮಾಡ್ತಾರೆ. ಇಬ್ಬರ ಮಧ್ಯೆ ಸಂತೋಷ, ಪ್ರೀತಿಯನ್ನು ಹೆಚ್ಚು ಮಾಡುವ ಈ ಹಬ್ಬದಲ್ಲಿ ವಾಸ್ತು ಕೂಡ ಮಹತ್ವದ ಪಾತ್ರ ವಹಿಸುತ್ತದೆ.

ಮಾರುಕಟ್ಟೆಯಲ್ಲಿ ರಾಖಿಗಳು ರಾರಾಜಿಸುತ್ತಿವೆ. ಜನರನ್ನು ಆಕರ್ಷಿಸಲು ಕೃತಕ ವಸ್ತುಗಳನ್ನು ಬಳಸಿ ಸುಂದರ ರಾಖಿಗಳನ್ನು ಸಿದ್ಧಪಡಿಸಲಾಗಿದೆ. ಆದ್ರೆ ಸಹೋದರ ಯಶಸ್ಸು ಬಯಸುವವರು ನೈಸರ್ಗಿಕ ವಸ್ತುಗಳನ್ನು ಬಳಸಿ ತಯಾರಿಸಿದ ರಾಖಿಯನ್ನು ಕಟ್ಟಬೇಕು.

ಮಾರುಕಟ್ಟೆಯಲ್ಲಿ ಬೇರೆ ಬೇರೆ ಬಣ್ಣಗಳ ರಾಖಿಗಳಿರುತ್ತವೆ. ಚೆನ್ನಾಗಿದೆ ಎನ್ನುವ ಕಾರಣಕ್ಕೆ ಕಪ್ಪು ಬಣ್ಣದ ರಾಖಿಯನ್ನು ಸಹೋದರನಿಗೆ ಕಟ್ಟುವ ತಪ್ಪು ಮಾಡಬೇಡಿ. ವಾಸ್ತು ಶಾಸ್ತ್ರದ ಪ್ರಕಾರ, ಕೆಂಪು, ಕಿತ್ತಳೆ, ಹಳದಿ ಬಣ್ಣದ ರಾಖಿ ಶುಭ ಫಲ ನೀಡುತ್ತದೆ.

ರಾಖಿ ಕಟ್ಟುವ ವೇಳೆ ದಿಕ್ಕು ಕೂಡ ಮಹತ್ವ ಪಡೆಯುತ್ತದೆ. ರಾಖಿ ಕಟ್ಟುವ ವೇಳೆ ಸಹೋದರ-ಸಹೋದರಿ ಈಶಾನ್ಯ ಅಥವಾ ಪೂರ್ವ ದಿಕ್ಕಿಗೆ ಕುಳಿತುಕೊಳ್ಳಬೇಕು. ಇದು ಸಕಾರಾತ್ಮಕ ಶಕ್ತಿಯನ್ನು ವೃದ್ಧಿಸುತ್ತದೆ.

ರಾಖಿ ಕಟ್ಟುವ ವೇಳೆ ಕಿಟಕಿ ಹಾಗೂ ಬಾಗಿಲು ತೆರೆದಿರಲಿ. ಒಳ್ಳೆ ಗಾಳಿ, ಬೆಳಕು ಸಕಾರಾತ್ಮಕ ಶಕ್ತಿಯನ್ನು ವೃದ್ಧಿಸುತ್ತದೆ.

ಸಹೋದರರು ಅಪ್ಪಿತಪ್ಪಿಯೂ ನಕಲಿ ಆಭರಣಗಳನ್ನು ಸಹೋದರಿಯರಿಗೆ ನೀಡಬೇಡಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read