ಗಮನಿಸಿ : ಆ.25 ಕ್ಕೆ ‘KAS’ ಪೂರ್ವಭಾವಿ ಪರೀಕ್ಷೆ ನಿಗದಿ |KAS Preliminary-Exam

ಬೆಂಗಳೂರು : ಗೆಜೆಟೆಡ್ ಪ್ರೊಬೇಷನರಿ 384 ಹುದ್ದೆಗಳ ನೇಮಕಾತಿಯ ಪೂರ್ವಭಾವಿ ಪರೀಕ್ಷೆ ಮುಂದೂಡಲಾಗಿದ್ದು, ಆ 25 ಕ್ಕೆ ನಿಗದಿ ಮಾಡಲಾಗಿದೆ.

ಹೌದು, 2017-18ನೇ ಸಾಲಿನ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ್ದವರು, ವಯೋಮಿತಿ ನಿರ್ಬಂಧವಿಲ್ಲದೇ ಈ ಬಾರಿ ಅರ್ಜಿ ಸಲ್ಲಿಸಲು ವಿಶೇಷ ಅವಕಾಶವನ್ನು ಸರ್ಕಾರ ಕಲ್ಪಿಸಿದ್ದು, 15 ದಿನ ಕಾಲಾವಕಾಶವನ್ನು ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಗ್ರೂಪ್ ಎ ಮತ್ತು ಬಿ ವೃಂದದ ಹುದ್ದೆಗಳಿಗೆ ಜುಲೈ 21ರ ಬದಲು ಆ.25ರಂದು ಪರೀಕ್ಷೆ ನಡೆಸಲಾಗುವುದು ಎಂದು ಕೆಪಿಎಸ್ಸಿ ಪ್ರಕಟಣೆ ಹೊರಡಿಸಿದೆ.

ಕೆಪಿಎಸ್ಸಿ ಕೆಎಎಸ್ ಪ್ರಿಲಿಮ್ಸ್ ಪರೀಕ್ಷೆಯನ್ನು ಪರಿಷ್ಕೃತ ವೇಳಾಪಟ್ಟಿ ಪ್ರಕಾರ ದಿನಾಂಕ 25-08-2024 ರಂದು ನಡೆಸಲು ಉದ್ದೇಶಿಸಿದೆ. ಅಭ್ಯರ್ಥಿಗಳು ಈ ಪರೀಕ್ಷೆಗೆ ತಯಾರಿ ನಡೆಸಲು ಈಗ ಮತ್ತೆ ಎರಡು ತಿಂಗಳಷ್ಟು ಕಾಲಾವಕಾಶವನ್ನು ಪಡೆದಂತಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read