ಬಿಗ್ ಬಾಸ್ ಸೀಸನ್ 16ರ ವಿಜೇತ, ರಾಪರ್ ಎಂಸಿ ಸ್ಟಾನ್ ಇತ್ತೀಚೆಗೆ ಹಿಂದೂ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದ್ದು ಮಧ್ಯಪ್ರದೇಶದ ಇಂಧೋರ್ ನಲ್ಲಿ ನಡೆಯಬೇಕಿದ್ದ ಅವರ ಸಂಗೀತ ಕಾರ್ಯಕ್ರಮ ರದ್ದಾಗಿದೆ.
ಕರ್ಣಿ ಸೇನೆಯು ಎಂಸಿ ಸ್ಟಾನ್ ವಿರುದ್ಧ ಪ್ರತಿಭಟನೆ ನಡೆಸಿ ಅವರ ಸಂಗೀತ ಕಚೇರಿಯನ್ನು ರದ್ದಾಗುವಂತೆ ಮಾಡಿದೆ.
ರಾಪರ್ ಎಂಸಿ ಸ್ಟಾನ್ ನಿಂದನೀಯ ಹಾಡುಗಳನ್ನು ಮಾಡುವ ಮೂಲಕ ಯುವ ಮನಸ್ಸುಗಳನ್ನು ಕಲುಷಿತಗೊಳಿಸುತ್ತಿದ್ದಾರೆ ಎಂದು ಕರ್ಣಿ ಸೇನೆ ಸದಸ್ಯರು ಆರೋಪಿಸಿದ್ದಾರೆ.
ಸಂಗೀತ ಕಾರ್ಯಕ್ರಮ ನಡೆಯಬೇಕಿದ್ದ ವೇದಿಕೆ ಮೇಲೆ ಕರ್ಣಿ ಸೇನೆ ಸದಸ್ಯರು ಪ್ರೇಕ್ಷಕರನ್ನು ಅಲ್ಲಿಂದ ಜಾಗ ಖಾಲಿ ಮಾಡುವಂತೆ ಹೇಳುತ್ತಿರುವ ವಿಡಿಯೋ ವೈರಲ್ ಆಗಿದೆ.
ಅಷ್ಟೇ ಅಲ್ಲ, ಸೇನೆಯ ಸದಸ್ಯರೊಬ್ಬರು ಎಂಸಿ ಸ್ಟಾನ್ ಕೈಗೆ ಸಿಕ್ಕಿದರೆ ಕಪಾಳಮೋಕ್ಷ ಮಾಡುವುದಾಗಿ ಬೆದರಿಕೆ ಹಾಕಿದರು.
https://twitter.com/fpjindia/status/1636990545452040198?ref_src=twsrc%5Etfw%7Ctwcamp%5Etweetembed%7Ctwterm%5E1636990545452040198%7Ctwgr%5Ed0cf0fe7d8c130a8051c803c585b3ea59c6530e1%7Ctwcon%5Es1_&ref_url=https%3A%2F%2Fwww.freepressjournal.in%2Fentertainment%2Ftelevision%2Fwatch-karni-sena-members-threaten-to-slap-bigg-boss-16-winner-mc-stan-hijack-his-concert-in-indore