BIG NEWS: ರಾಜ್ಯದ ಎರಡು ಘಟಕಗಳ ತುಪ್ಪ ತಯಾರಿಕೆಯಲ್ಲಿ ಕಲಬೆರಿಕೆ ಪತ್ತೆ: ನೊಟೀಸ್ ಜಾರಿ

ಬೆಂಗಳೂರು: ತಿರುಪತಿ ಲಡ್ಡು ಪ್ರಸಾದ ತಯಾರಿಕೆಗೆ ಕಲಬೆರಿಕೆ ತುಪ್ಪ, ಪ್ರಾಣಿಗಳ ಕೊಬ್ಬು ಮಿಶ್ರಿತ ತುಪ್ಪ ಬಳಕೆ ವಿವಾದದ ಬೆನ್ನಲ್ಲೇ ಎಚ್ಚೆತ್ತುಕೊಂಡಿದ್ದ ಕರ್ನಾಟಕ ಸರ್ಕಾರ ರಾಜ್ಯದಲ್ಲಿ ತಯಾರಾಗುವ ತುಪ್ಪದ ಮಾದರಿ ಪರೀಕ್ಷೆಗೆ ಸೂಚಿಸಿತ್ತು. ಇದೀಗ ರಾಜ್ಯದ ಎರಡು ಘಟಕಗಳ ತಯಾರಾಗುವ ತುಪ್ಪ ಕಲಬೆರಿಕೆ ತುಪ್ಪ ಎಂಬುದು ಪತ್ತೆಯಾಗಿದೆ.

ಆಹಾರ ಸುರಕ್ಷತಾ ಇಲಾಖೆ 40 ಕಡೆ ತುಪ್ಪ ಸಂಗ್ರಹಿಸಿ ಪರೀಕ್ಷೆ ನಡೆಸಿತ್ತು. ಈ ವೇಳೆ ರಾಜ್ಯದ ಎರಡು ಕಡೆ ಕಲಬೆರಿಕೆ ತುಪ್ಪ ಕಂಡುಬಂದಿದೆ.

ಬೆಂಗಳೂರು ಹಾಗೂ ಬಾಗಲಕೋಟೆಯ ಘಟಕದಲ್ಲಿ ತಯಾರಾಗುವ ತುಪ್ಪ ಸೇಫ್ ಇಲ್ಲ ಎಂದು ತಿಳಿದುಬಂದಿದೆ. ಆಹಾರ ಇಲಾಖೆ ವರದಿ ಹಿನ್ನೆಲೆಯಲ್ಲಿ ಎರಡೂ ಘಟಕಗಳಿಗೆ ನೋಟಿಸ್ ನೀಡಲಾಗಿದೆ. 30 ದಿನಗಳ ಒಳಗೆ ತುಪ್ಪ ಅಸುರಕ್ಷತೆ ಅಲ್ಲ ಎಂಬುದನ್ನು ಸಾಬೀತುಪಡಿಸಿಕೊಳ್ಳಲು ಇಲಾಖೆ ಸೂಚನೆ ನೀಡಿದೆ. ಮೈಸೂರು ಲ್ಯಾಬ್ ನಲ್ಲಿ ಖಚಿತತೆಯ ಪರೀಕ್ಷೆ ನಡೆಸಲಾಗುತ್ತಿದೆ.

ತಿರುಪತಿ ಲಡ್ಡು ಪ್ರಸಾದ ತಯಾರಿಕೆಯಲ್ಲಿ ಕಲಬೆರಿಕೆ ತುಪ್ಪ ಬಳಕೆ ಪತ್ತೆಯಾದ ಬಳಿಕ ರಾಜ್ಯಾದ್ಯಂತ ದೇವಾಲಯಗಳಲ್ಲಿ ನಂದಿನಿ ತುಪ್ಪ ಕಡ್ಡಾಯ ಮಾಡಿ ಕರ್ನಾಟಕ ಸರ್ಕಾರ ಅದೇಶ ಹೊರಡಿಸಿತ್ತು. ಅಲ್ಲದೇ ರಾಜ್ಯದಲ್ಲಿ ಬೇರೆ ಬೇರೆ ಘಟಕಗಳಲ್ಲಿ ತಯಾರಾಗುವ ತುಪ್ಪದ ಗುಣಮಟ್ಟದ ಪರೀಕ್ಷೆಗೂ ಸೂಚಿಸಿತ್ತು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read