ರಾಜ್ಯದಲ್ಲಿ ಕೋವಿಡ್ ಲಸಿಕೆ ದಾಸ್ತಾನು ಕೊರತೆ; ನೇರ ಖರೀದಿಗೆ ಕರ್ನಾಟಕ ಸಿದ್ಧ

ಕೋವಿಡ್ ಲಸಿಕೆ ದಾಸ್ತಾನು ಕೊರತೆ ಎದುರಿಸುತ್ತಿರುವ ನಾಲ್ಕು ತಿಂಗಳ ನಂತರ ಕರ್ನಾಟಕವು 5,000 ಡೋಸ್ ಕಾರ್ಬೆವಾಕ್ಸ್ ಅನ್ನು ಪಡೆಯಲು ಸಿದ್ಧವಾಗಿದೆ. ಆರೋಗ್ಯ ಇಲಾಖೆಯು ಲಸಿಕೆ ಖರೀದಿ ಪ್ರಕ್ರಿಯೆಯನ್ನು ಪ್ರಾರಂಭಿಸುತ್ತಿದೆ.

ಇದು ತಾತ್ಕಾಲಿಕ ಕ್ರಮವಾಗಿದ್ದು ರಾಜ್ಯವು ಕೇಂದ್ರದಿಂದ ಇನ್ನೂ 20,000 ಡೋಸ್‌ಗಳನ್ನು ಪಡೆಯುವ ನಿರೀಕ್ಷೆಯಿದೆ ಎಂದು ರಾಷ್ಟ್ರೀಯ ಆರೋಗ್ಯ ಮಿಷನ್‌ನ ನಿರ್ದೇಶಕ ಡಾ. ನವೀನ್ ಭಟ್ ಹೇಳಿದ್ದಾರೆ.

ಶಾಲೆ ತೆರೆಯುವ ಮುನ್ನವೇ ಮಕ್ಕಳಿಗೆ ಲಸಿಕೆ ಹಾಕಲು ಬಯಸುವ ಪೋಷಕರು ಸೇರಿದಂತೆ ವಿವಿಧ ಜಿಲ್ಲೆಗಳಿಂದ ಲಸಿಕೆಗಾಗಿ ಆರೋಗ್ಯ ಇಲಾಖೆಗೆ ಮನವಿಗಳು ಬರುತ್ತಿವೆ.

ರಾಜ್ಯವು ಉತ್ಪಾದಕರಿಂದ ನೇರವಾಗಿ ಲಸಿಕೆಗಳನ್ನು ಖರೀದಿಸುತ್ತಿರುವುದು ಇದೇ ಮೊದಲು. ಏಪ್ರಿಲ್‌ನಲ್ಲಿ ರಾಜ್ಯಕ್ಕೆ ಲಸಿಕೆಗಳನ್ನು ಖರೀದಿಸಲು ಕೇಂದ್ರ ನಿರಾಕರಿಸಿದ್ದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

“ನಾವು ಚುನಾವಣಾ ಸಮಯದಲ್ಲಿ ರಾಜ್ಯ ಹಣಕಾಸು ಇಲಾಖೆ ಮತ್ತು ಚುನಾವಣಾ ಆಯೋಗದಿಂದ ನೀತಿ ಸಂಹಿತೆಯಿಂದ ವಿನಾಯಿತಿಗಾಗಿ ಅನುಮತಿಗಳನ್ನು ಪಡೆದಿದ್ದೆವು. ನಂತರ ಖರೀದಿ ಸಮಿತಿಯು ಇತ್ತೀಚೆಗೆ ಸಭೆ ಸೇರಿ ಆದೇಶಗಳನ್ನು ನೀಡಲು ನಿರ್ಧರಿಸಿದೆ ಎಂದು ಡಾ. ನವೀನ್ ಭಟ್ ಹೇಳಿದರು.

ಇಲಾಖೆಯು ಎರಡು ಲಕ್ಷ ಡೋಸ್‌ಗಳನ್ನು ಖರೀದಿಸಲು ಹಣಕಾಸು ಇಲಾಖೆಯಿಂದ ಅನುಮತಿ ಪಡೆದಿತ್ತು. ಆದರೆ ಕೇಂದ್ರದಿಂದ ಮತ್ತೆ ಲಸಿಕೆ ಸಿಗುವ ನಿರೀಕ್ಷೆಯ ಕಾರಣದಿಂದ ಡೋಸ್ ಸಂಖ್ಯೆಯನ್ನು ಕಡಿಮೆ ಮಾಡಲಾಗಿದೆ ಎಂದು ಹೇಳಿದರು.

ಲಸಿಕೆಗಳನ್ನು ಖರೀದಿಸಲು ಕೇಂದ್ರವು ಇನ್ನೂ ಕಾಲಮಿತಿಗೆ ಬದ್ಧವಾಗಿಲ್ಲ. ಕೋವಿಶೀಲ್ಡ್ ಮತ್ತು ಕೋವಾಕ್ಸಿನ್ ತಯಾರಕರು ಹೊಸ ಲಸಿಕೆಗಳನ್ನು ತಯಾರಿಸಲು 3-4 ತಿಂಗಳುಗಳನ್ನು ತೆಗೆದುಕೊಳ್ಳಲಾಗುತ್ತೆ ಎಂದು ಹೇಳಿದ್ದಾರೆ. ಆದ್ದರಿಂದ ನಾವು ಅವುಗಳನ್ನು ನಂತರ ಸಂಗ್ರಹಿಸುತ್ತೇವೆ ಎಂದು ಡಾ. ನವೀನ್ ಭಟ್ ಹೇಳಿದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read