ಪ್ರೀತಿಸುವಂತೆ ಯುವಕನ ಗಂಟುಬಿದ್ದ ಬಾಲಕಿ; ನಿರಾಕರಿಸಿದ್ದಕ್ಕೆ 3 ವರ್ಷದ ಮಗು ಹತ್ಯೆಗೈದು ಜೈಲು ಪಾಲು…!

ತನ್ನನ್ನು ಪ್ರೀತಿಸುವಂತೆ ಸಮೀಪದ ಬಂಧುವನ್ನು ಪದೇ ಪದೇ ಪೀಡಿಸುತ್ತಿದ್ದ 16 ವರ್ಷದ ಬಾಲಕಿಯೊಬ್ಬಳು ಆತ ಅದನ್ನು ನಿರಾಕರಿಸಿದನೆಂಬ ಕಾರಣಕ್ಕೆ ಸೇಡು ತೀರಿಸಿಕೊಳ್ಳಲು ಮೂರು ವರ್ಷದ ಮಗುವನ್ನು ಕೊಂದಿರುವ ಆಘಾತಕಾರಿ ಘಟನೆ ಯಾದಗಿರಿ ಜಿಲ್ಲೆಯಲ್ಲಿ ನಡೆದಿದೆ.

ಬಾಲಕಿ ಮತ್ತು ಆಕೆ ಪ್ರೀತಿಸಲು ಬಯಸಿದ್ದ ಯುವಕ ಯಲ್ಲಪ್ಪ ತಮ್ಮ ಕುಟುಂಬಗಳೊಂದಿಗೆ ಒಂದೇ ಮನೆಯಲ್ಲಿ ವಾಸಿಸುತ್ತಿದ್ದು, ತನ್ನನ್ನು ಪ್ರೀತಿಸುವಂತೆ ಬಾಲಕಿ ಯಲ್ಲಪ್ಪನಿಗೆ ಕಳೆದೆರಡು ವರ್ಷಗಳಿಂದ ಗಂಟು ಬಿದ್ದಿದ್ದಳು ಎನ್ನಲಾಗಿದೆ.

ಆದರೆ ಆತ ಪ್ರೀತಿಸಲು ಪದೇ ಪದೇ ನಿರಾಕರಿಸಿದ್ದು, ಸಮೀಪದ ಬಂಧುಗಳಾಗಿರುವ ಕಾರಣ ಇದು ಸರಿಯಲ್ಲ ಎಂದು ಬುದ್ಧಿ ಹೇಳಿದ್ದಾನೆ. ಇದರಿಂದ ರೊಚ್ಚಿಗೆದ್ದ ಬಾಲಕಿ ಆತ ತುಂಬಾ ಹಚ್ಚಿಕೊಂಡಿದ್ದ ತನ್ನ ಸಹೋದರನ ಪುತ್ರ 3 ವರ್ಷದ ಮಗುವನ್ನು ಬಾವಿಗೆ ತಳ್ಳಿ ಕೊಲೆ ಮಾಡಿದ್ದಾಳೆ.

ಮಗು ಕಾಣೆಯಾಗಿರುವ ಕುರಿತು ಪೊಲೀಸರಿಗೆ ದೂರು ದಾಖಲಿಸಿದಾಗ ಯಾರೋ ಆತನನ್ನು ಕರೆದುಕೊಂಡು ಹೋಗಿದ್ದಾಗಿ ಬಾಲಕಿ ತಿಳಿಸಿದ್ದು, ಅನುಮಾನದ ಮೇರೆಗೆ ಹೆಚ್ಚಿನ ವಿಚಾರಣೆ ನಡೆಸಿದಾಗ ಅವಳ ಕೃತ್ಯ ಬೆಳಕಿಗೆ ಬಂದಿದೆ. ಅಲ್ಲದೆ ಈ ಪ್ರಕರಣದಲ್ಲಿ ಯಲ್ಲಪ್ಪನನ್ನು ಸಿಲುಕಿಸಲು ಆಕೆ ಸಂಚು ರೂಪಿಸಿದ್ದಳು ಎಂಬ ಸಂಗತಿ ಬಹಿರಂಗವಾಗಿದೆ.

ಜುಲೈ 6 ರಂದು ಈ ಘಟನೆ ನಡೆದಿದ್ದು ಇದೀಗ ಬಾಲಕಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ಆಕೆಯ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 103ರ ಪ್ರಕಾರ ಕೇಸ್ ದಾಖಲಿಸಿಕೊಂಡು ಹೆಚ್ಚಿನ ವಿಚಾರಣೆ ನಡೆಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read