BIG NEWS: ಸಂಗೀತ ನೃತ್ಯ ಅಕಾಡೆಮಿಯಿಂದ ‘ಕರ್ನಾಟಕ ಕಲಾಶ್ರೀ ಪ್ರಶಸ್ತಿ’ ಪ್ರಕಟ: ಇಲ್ಲಿದೆ ಪುರಸ್ಕೃತರ ಪಟ್ಟಿ

ಬೆಂಗಳೂರು: ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ವತಿಯಿಂದ “2023-24ನೇ ಸಾಲಿನ ಸಂಗೀತ  ಮತ್ತು ನೃತ್ಯ  ಕ್ಷೇತ್ರಗಳಲ್ಲಿ  ಅನುಪಮ ಸೇವೆ ಸಲ್ಲಿಸಿದ ಹಿರಿಯ ಕಲಾವಿದರಿಗೆ ಕರ್ನಾಟಕ ಕಲಾಶ್ರೀ ಪ್ರಶಸ್ತಿ” ನೀಡಿ ಪುರಸ್ಕೃರಿಸಲು  ಪಟ್ಟಿಯನ್ನು ಪ್ರಕಟಿಸಿದೆ.

ಗೌರವ ಪ್ರಶಸ್ತಿ ವಿಭಾಗ:(ಹಿಂದೂಸ್ಥಾನಿ ಸಂಗೀತ)- ಗಾಯನದಲ್ಲಿ ಬಳ್ಳಾರಿಯ ಡಿ.ಕುಮಾರ್ ದಾಸ್ ಮತ್ತು ಸುಗಮ ಸಂಗೀತದಲ್ಲಿ ರಾಯಚೂರಿನ ಅಂಬಯ್ಯ ನುಲಿ.

ವಾರ್ಷಿಕ ಪ್ರಶಸ್ತಿ ವಿಭಾಗ:(ಕರ್ನಾಟಕ ಸಂಗೀತದಲ್ಲಿ)– ಬೆಂಗಳೂರಿನ ಪದ್ಮ ಗುರುದತ್ -ಹಾಡುಗಾರಿಕೆ, ಮೈಸೂರಿನ ರೇವತಿ ಕಾಮತ್ – ವೀಣೆ, ಕೋಲಾರದ ವಿ.ರಮೇಶ್ – ನಾದಸ್ವರ ಮತ್ತು ಮಂಗಳೂರಿನ ಕದ್ರಿ ರಮೇಶ್ ನಾಥ್ – ಸ್ಯಾಕ್ಸೋಪೋನ್.

ಹಿಂದೂಸ್ಥಾನಿ ಸಂಗೀತ: ಕೊಪ್ಪಳದ ವಿರೂಪಾಕ್ಷ ರೆಡ್ಡಿ ಓಣಿಮನಿ-ಗಾಯನ, ಧಾರವಾಡದ ಶಫಿಖಾನ್ – ಸಿತಾರಾ ಮತ್ತು ಹುಬ್ಬಳ್ಳಿಯ ಸತೀಶ್ ಹಂಪಿಹೋಳಿ – ತಬಲದ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ನೃತ್ಯ ವಿಭಾಗ: ಬೆಂಗಳೂರಿನ ಸವಿತಾ ಅರುಣ, ಮಾಲಾ ಶಶಿಕಾಂತ್, ಒಡಿಸ್ಸಿಯ ಶರ್ಮಿಳಾ ಮುಖರ್ಜಿ ಮತ್ತು ಆನೇಕಲ್ನಮ ಸಯ್ಯದ್ ಸಲಾವುದ್ದೀನ್ ಪಾಷ.

ಸುಗಮ ಸಂಗೀತ ವಿಭಾಗ: ಬೆಂಗಳೂರಿನ ಆನಂದ ಮಾದಲಗೆರೆ. ಕಥಾ ಕೀರ್ತನೆ ವಿಭಾಗ: ಮಂಡ್ಯದ ಎಂ. ಎಸ್. ನಾಗರಾಜಾಚಾರ್. ಗಮಕ ವಿಭಾಗ: ಬೆಂಗಳೂರಿನ ಜಿ. ಎಸ್. ನಾರಾಯಣ- ವಾಚನ.  ಹೊರದೇಶ ಕನ್ನಡ ಕಲಾವಿದರ ವಿಭಾಗ: ಅಮೇರಿಕಾದ ಕೆ.ಆರ್ಎಎಸ್. ಪ್ರಸನ್ನ, ಕಸ್ತೂರಿ- ಭರತನಾಟ್ಯ.

ಸಂಘ ಸಂಸ್ಥೆ ವಿಭಾಗ: ಬೆಂಗಳೂರಿನ ಶ್ರೀವಾಣಿ ಸ್ಕೂಲ್ ಎಜುಕೇಶನ್ ಟ್ರಸ್ಟ್ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಪ್ರಶಸ್ತಿ ಪ್ರದಾನ ಸಮಾರಂಭವು 2024 ನೇ ನವೆಂಬರ್ ಅಥವಾ ಡಿಸೆಂಬರ್ ತಿಂಗಳಿನಲ್ಲಿ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿದೆ ಎಂದು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ರಿಜಿಸ್ಟ್ರಾರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read