ರೈತರಿಗೆ ಭರ್ಜರಿ ಗುಡ್‌ ನ್ಯೂಸ್: ಕೃಷಿ ಮಾಹಿತಿಗಳನ್ನೊಳಗೊಂಡ ಎಐ ಆಧಾರಿತ ಅಪ್ಲಿಕೇಶನ್ ಶೀಘ್ರದಲ್ಲೇ ಶುರು

ಬೆಂಗಳೂರು: ರೈತರಿಗಾಗಿ ಕರ್ನಾಟಕ ಸರ್ಕಾರ ಕೃತಕ ಬುದ್ಧಿಮತ್ತೆ (ಎಐ) ಆಧಾರಿತ  ಅಪ್ಲಿಕೇಶನ್ ಪ್ರಾರಂಭಿಸಲು ಚಿಂತನೆ ನಡೆಸಿದೆ ಎಂದು ಕೃಷಿ ಸಚಿವ ಎನ್. ಚೆಲುವರಾಯಸ್ವಾಮಿ ಹೇಳಿದ್ದಾರೆ.

ರಾಜ್ಯದ ರೈತರಿಗೆ ಏಕಗವಾಕ್ಷಿ ಪರಿಹಾರ ಒದಗಿಸಲು ಕೃಷಿ ಇಲಾಖೆಯು ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಆ್ಯಪ್ ಅನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲು ಯೋಜಿಸುತ್ತಿದೆ ಎಂದು ಸಚಿವರು ತಿಳಿಸಿದ್ರು.

ಕೇಂದ್ರೀಕೃತ ರೈತರ ಕಾಲ್ ಸೆಂಟರ್ ಉದ್ಘಾಟಿಸಿ ಮಾತನಾಡಿದ ಸಚಿವ ಚೆಲುವರಾಯಸ್ವಾಮಿ, ಎಐ ಆಧಾರಿತ ಸೂಪರ್ ಆ್ಯಪ್ ಹವಾಮಾನ ಮತ್ತು ಮಣ್ಣಿನ ಗುಣಮಟ್ಟದ ಬಗ್ಗೆ ಮಾಹಿತಿ ನೀಡಲು ಸಾಧ್ಯವಾಗುತ್ತದೆ. ಬೀಜಗಳು, ಬೆಳೆ ಮಾದರಿಗಳು ಮತ್ತು ಹಲವಾರು ಕೃಷಿ ಆಧಾರಿತ ಮಾಹಿತಿಯು ಒಂದೇ ಅಪ್ಲಿಕೇಶನ್‌ನಲ್ಲಿ ಇರಲಿದೆ ಎಂದು ಅವರು ಹೇಳಿದ್ರು.

ಕೃಷಿ ಇಲಾಖೆಯು ಕೃಷಿಗೆ ಸಂಬಂಧಿಸಿದ ಪ್ರತಿಯೊಂದು ಅಂಶಗಳ ಬಗ್ಗೆ ಸಾಕಷ್ಟು ಮಾಹಿತಿಯನ್ನು ಹೊಂದಿದೆ. ಇದನ್ನು ಎಐ- ಆಧಾರಿತ ಅಪ್ಲಿಕೇಶನ್‌ಗೆ ಫೀಡ್ ಮಾಡಬಹುದು. ಪ್ರತಿಯಾಗಿ, ಇದು ರೈತರ ಅಗತ್ಯಗಳಿಗೆ ಸರಿಹೊಂದುವಂತೆ ಪ್ರಕ್ರಿಯೆಗೊಳಿಸುತ್ತದೆ ಮತ್ತು ಮಾಹಿತಿಯನ್ನು ಒದಗಿಸುತ್ತದೆ. ಇದಲ್ಲದೆ, ಈ ಅಪ್ಲಿಕೇಶನ್ ಎಲ್ಲಾ 14 ಭಾಷೆಗಳನ್ನು ಒಳಗೊಂಡಿರುತ್ತದೆ ಎಂದು ಸಚಿವರು ವಿವರಿಸಿದ್ರು.

ಇನ್ನು ಕಾಲ್ ಸೆಂಟರ್ ಅನ್ನು ಉದ್ಘಾಟಿಸಿದ ಸಚಿವರು, ರೈತರಿಗೆ ಸಹಾಯ ಮಾಡಲು ಬಹು ಸಹಾಯವಾಣಿಗಳನ್ನು (ಸುಮಾರು ಎಂಟು ಸಹಾಯವಾಣಿಗಳು) ಸ್ಥಾಪಿಸಲಾಗಿದೆ ಎಂದು ಹೇಳಿದ್ರು. ಆದರೆ, ಈ ಸಹಾಯವಾಣಿಗಳು ರೈತರಿಗೆ ಸಹಾಯ ಮಾಡುವುದಕ್ಕಿಂತ ಹೆಚ್ಚಿನ ಗೊಂದಲವನ್ನು ಉಂಟುಮಾಡುತ್ತಿವೆ. ಹೀಗಾಗಿ, ನಾವು ಈ ಎಲ್ಲಾ ಸಹಾಯವಾಣಿಗಳನ್ನು ವಿಲೀನಗೊಳಿಸಲು ಮತ್ತು ರೈತರಿಗೆ ಮಾಹಿತಿ ನೀಡಲು ಕಾಲ್ ಸೆಂಟರ್ ಅನ್ನು ಸ್ಥಾಪಿಸಲು ನಿರ್ಧರಿಸಿದ್ದೇವೆ ಎಂದು ಹೇಳಿದ್ರು.

ಈ ಎಂಟು ಸಹಾಯವಾಣಿಗಳು ವಾರಕ್ಕೊಮ್ಮೆ ಸುಮಾರು 500 ಕರೆಗಳನ್ನು ಸ್ವೀಕರಿಸುತ್ತಿದ್ದವು. ಎಲ್ಲಾ ಸಹಾಯವಾಣಿಗಳನ್ನು ವಿಲೀನಗೊಳಿಸಿದ ನಂತರ ನೌಕರರನ್ನು ನೇಮಿಸಲಾಗುತ್ತದೆ. ಮೊದಲ ಹಂತದಲ್ಲಿ 30 ನೌಕರರು ಮತ್ತು ನಿಧಾನವಾಗಿ ಅಗತ್ಯಕ್ಕೆ ಅನುಗುಣವಾಗಿ ಲೈನ್‌ಗಳು ಮತ್ತು ಜನರ ಸಂಖ್ಯೆಯನ್ನು ಹೆಚ್ಚಿಸುತ್ತೇವೆ ಎಂದು ಅವರು ಹೇಳಿದರು. ರೈತರು ಸಹಾಯಕ್ಕಾಗಿ 18004253553 ಗೆ ಕರೆ ಮಾಡಬಹುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read