ಕರ್ನಾಟಕ ವಿಧಾನ ಸಭಾ ಚುಣಾವಣೆ: ಮತಗಟ್ಟೆ ಸುತ್ತ ಈ ಕೆಲಸಗಳನ್ನು ಮಾಡುವಂತಿಲ್ಲ

ಕರ್ನಾಟಕ ವಿಧಾನ ಸಭಾ ಚುನಾವಣೆಗೂ ಮುನ್ನ ರಾಜ್ಯದ ಎಲ್ಲಾ ಮತಗಟ್ಟೆಗಳ ಸುತ್ತಲೂ ಭಾರೀ ಭದ್ರತೆಯ ಬಂದೋಬಸ್ತ್‌ ಮಾಡಿಕೊಳ್ಳಲಾಗುತ್ತಿದೆ. ಉತ್ತರ ಕನ್ನಡ ಜಿಲ್ಲೆಯ 1,435 ಮತಗಟ್ಟಟೆಗಳ ಸುತ್ತಲಿನ 200 ಮೀಟರ್‌ ವ್ಯಾಪ್ತಿಯಲ್ಲಿ ನಿಷೇಧಾಜ್ಞೆಯ ಸ್ಥಿತಿ ಕಾಪಾಡಿಕೊಳ್ಳಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

ಮೇ 10ರಂದು ಮತದಾನ ನಡೆಯಲಿದ್ದು, ಮೇ 8ರ ರಾತ್ರಿ 10ಗಂಟೆಯಿಂದ ಮೇ 11ರ ಬೆಳಿಗ್ಗೆ 6 ಗಂಟೆವರೆಗೂ ನಿಷೇಧಾಜ್ಞೆ ಜಾರಿಯಲ್ಲಿರಲಿದೆ ಎಂದು ಉತ್ತರ ಕನ್ನಡ ಜಿಲ್ಲಾ ಚುನಾವಣಾಧಿಕಾರಿ ಪ್ರಭುಲಿಂಗ ಕಾವಾಲಿಕಟ್ಟಿ ತಿಳಿಸಿದ್ದಾರೆ.

ಮತದಾನದ ಕಾರಣ ಹೊರತು ಪಡಿಸಿ ಮಿಕ್ಕ ಯಾವುದೇ ಕಾರಣಕ್ಕೂ ಮತಗಟ್ಟೆಗಳ ಸುತ್ತ ದೊಡ್ಡ ಸಂಖ್ಯೆಯಲ್ಲಿ ಜನ ಸೇರುವುದು ನಿಷೇಧಿತವಾಗಿದೆ. ಮೆರವಣಿಗೆಗಳು, ಅಭ್ಯರ್ಥಿಗಳು ಹಾಗೂ ಕಾರ್ಯಕರ್ತರ ಭೇಟಿಗಳನ್ನು ನಿಷೇಧಿಸಲಾಗಿದೆ.

ಸುತ್ತಿಗೆಗಳು, ಕತ್ತಿಗಳು, ಗನ್‌ಗಳು, ಗುರಾಣಿಗಳು, ದೊಣ್ಣೆಗಳು, ಚಾಕುಗಳು ಹಾಗೂ ಇತರೆ ಯಾವುದೇ ಆಯುಧದೊಂದಿಗೆ ಓಡಾಡುವುದು ಕಾನೂನಿಗೆ ವಿರುದ್ಧವಾಗಿದೆ.

ಮತಗಟ್ಟೆ ಸುತ್ತಲಿನ 200 ಮೀಟರ್‌ ವ್ಯಾಪ್ತಿಯಲ್ಲಿ ಮತದಾರರಿಗೆ ಮತದಾನದ ವಿಚಾರವಾಗಿ ಏನೇ ಹೇಳುವುದನ್ನೂ ಸಹ ನಿಷೇಧಿಸಲಾಗಿದೆ. ಚುನಾವಣಾ ನೀತಿ ಸಂಹಿತೆಗೆ ಬದ್ಧವಾಗಿಯೇ ಮದುವೆ ಹಾಗೂ ಧಾರ್ಮಿಕ ಸಮಾರಂಭಗಳನ್ನು ಹಮ್ಮಿಕೊಳ್ಳಲು ಸೂಚಿಸಲಾಗಿದೆ.

ಕೋವಿಡ್-19 ಸೋಂಕು ವ್ಯಾಪಿಸದಂತೆ ಸಕಲ ಕ್ರಮಗಳನ್ನು ಮತಗಟ್ಟೆಗಳಲ್ಲಿ ಕೈಗೊಂಡು, ಯಾವುದೇ ಮೊಬೈಲ್ ಅಥವಾ ಎಲೆಕ್ಟ್ರಾನಿಕ್ ಸಾಧನಗಳನ್ನು ಅಲ್ಲಿಗೆ ತರುವುದನ್ನು ನಿಷೇಧಿಸಲಾಗಿದೆ. ಧ್ವನಿವರ್ಧಕಗಳ ಬಳಕೆ ಮೇಲೆ ನಿಷೇಧವಿದ್ದು, ಮತಗಟ್ಟೆಯ 200 ಮೀಟರ್‌ ಸುತ್ತಲೂ ಯಾವುದೇ ಪೋಸ್ಟರ್‌ ಅಥವಾ ಕಟೌಟ್‌ಗಳನ್ನು ಹಾಕುವಂತಿಲ್ಲ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read