ಮೇ 10 ರ ಬುಧವಾರ ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆ ಹಿಂದಿದೆ ಈ ಲೆಕ್ಕಾಚಾರ….!

ಕರ್ನಾಟಕ ವಿಧಾನಸಭಾ ಚುನಾವಣಾ ದಿನಾಂಕ ಘೋಷಣೆಯಾಗಿದ್ದು ಮೇ 10 ರ ಬುಧವಾರ ಮತದಾನ ನಡೆಯಲಿದೆ. ಮೇ 10ರಂದು ಮತದಾನ ದಿನವಾಗಿ ಘೋಷಣೆ ಮಾಡಿರುವುದರ ಹಿಂದೆ ಚುನಾವಣಾ ಅಧಿಕಾರಿಗಳು ಮತದಾನ ಪ್ರಮಾಣ ಹೆಚ್ಚು ಮಾಡುವ ಉದ್ದೇಶ ಹೊಂದಿದ್ದಾರೆ ಎನ್ನಲಾಗಿದೆ.

ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರು ಕರ್ನಾಟಕ ವಿಧಾನಸಭಾ ಚುನಾವಣಾ ವೇಳಾಪಟ್ಟಿ ಘೋಷಣೆಯ ಕುರಿತು ಪತ್ರಿಕಾಗೋಷ್ಠಿಯಲ್ಲಿ, ನಗರ ಪ್ರದೇಶದಲ್ಲಿ ಕಳೆದ ಬಾರಿ ಸರಾಸರಿಗಿಂತ ಕಡಿಮೆ ಮತದಾನದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ಹೀಗಾಗಿ ಈ ಬಾರಿ ಮತದಾನ ಪ್ರಮಾಣ ಹೆಚ್ಚು ಮಾಡಲು ಮೇ 10 ರ ಬುಧವಾರದಂದು ಮತದಾನ ನಡೆಯಲಿದೆ ಎಂದು ಘೋಷಿಸಿದ್ದಾರೆ.

ಸಾಮಾನ್ಯವಾಗಿ ವಾರದ ಕೊನೆ ದಿನಗಳಲ್ಲಿ ಮತದಾನ ನಡೆಸಿದ್ರೆ ಸಿಟಿ ಮಂದಿ ರಜೆ ಪಡೆದು ಔಟಿಂಗ್ ಅಥವಾ ಊರುಗಳಿಗೆ ಹೋಗೋದು ಸಾಮಾನ್ಯ. ಹೀಗಾಗಿ ಬುಧವಾರ ಮತದಾನ ನಡೆಯೋದ್ರಿಂದ ಸೋಮವಾರ , ಮಂಗಳವಾರ 2 ದಿನ ರಜೆ ಪಡೆಯೋದು ಕಷ್ಟ. ಅಥವಾ ಬುಧವಾರದ ನಂತರ ಗುರುವಾರ, ಶುಕ್ರವಾರ 2 ದಿನ ರಜೆ ಪಡೆಯೋದೂ ಸಹ ಕಷ್ಟಸಾಧ್ಯ. ಹೀಗಾಗಿ ಬುಧವಾರದಂದು ರಜೆ ದಿನಗಳಲ್ಲಿ ಜನ ವೋಟ್ ಮಾಡಲು ಮತಗಟ್ಟೆಗೆ ಹೆಚ್ಚು ಸಂಖ್ಯೆಯಲ್ಲಿ ಬರುತ್ತಾರೆಂಬ ಲೆಕ್ಕಾಚಾರವಿದೆ.

ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಮಾತನಾಡಿ”ವಾರದ ರಜೆಯ ಸಮೀಪದಲ್ಲಿ ಚುನಾವಣೆ ನಡೆದರೆ ಸೋಮವಾರ ಅಥವಾ ಶುಕ್ರವಾರದಂದು ಜನರು ರಜೆ ತೆಗೆದುಕೊಳ್ಳುವುದರಿಂದ ನಾವು ಬುಧವಾರದಂದು ಮತದಾನದ ದಿನಾಂಕವನ್ನು ಇಟ್ಟುಕೊಂಡಿದ್ದೇವೆ. ಬುಧವಾರ ಎರಡು ದಿನ ರಜೆ ನೀಡುವುದು ಕಷ್ಟಕರವಾಗಿರುತ್ತದೆ” ಎಂದು ಹೇಳಿದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read