ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಮೇಲೆ ಅಭಿಮಾನಿಗಳಿಂದ ಹಣದ ಸುರಿಮಳೆ….!

ಮುಂಬರುವ ವಿಧಾನಸಭಾ ಚುನಾವಣೆಗೆ ಇನ್ನೂ ದಿನಾಂಕ ಘೋಷಣೆಯಾಗಿಲ್ಲವಾದರೂ ಸಹ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಈಗಾಗಲೇ ಪ್ರಚಾರ ಕಾರ್ಯವನ್ನು ಆರಂಭಿಸಿವೆ. ಇದರ ಜೊತೆಗೆ ಆಕಾಂಕ್ಷಿಗಳು ಸಹ ತಮ್ಮ ತಮ್ಮ ಪಕ್ಷಗಳಿಂದ ಟಿಕೆಟ್ ಪಡೆಯಲು ಲಾಬಿ ನಡೆಸುತ್ತಿದ್ದಾರೆ.

ಟಿಕೆಟ್ ಪಡೆಯಲು ಪ್ರಯತ್ನ ನಡೆಸುವುದರ ಜೊತೆಗೆ ಮತದಾರರನ್ನು ಸೆಳೆಯುವ ಕಸರತ್ತು ಸಹ ನಡೆಯುತ್ತಿದ್ದು, ಮತದಾರರಿಗೆ ಧಾರ್ಮಿಕ ಕ್ಷೇತ್ರಗಳಿಗೆ ಪ್ರವಾಸ, ಕುಕ್ಕರ್ ಹಂಚಿಕೆ ಮೊದಲಾದ ಕಾರ್ಯಗಳು ನಡೆಯುತ್ತಿವೆ. ಅದರಲ್ಲೂ ಉಡುಗೊರೆ ನೀಡಲು ಹಬ್ಬ ಹರಿದಿನಗಳು ಆಕಾಂಕ್ಷಿಗಳಿಗೆ ವರದಾನವಾಗಿ ಪರಿಣಮಿಸಿವೆ.

ಹೀಗೆ ನೆಲಮಂಗಲ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿರುವ ಶ್ರೀನಿವಾಸ್, ಶಿವರಾತ್ರಿ ಹಬ್ಬದ ಉಡುಗೊರೆಯಾಗಿ ಮತದಾರರಿಗೆ ಬೆಳಿಗ್ಗೆ ಕುಕ್ಕರ್ ಹಂಚಿದ್ದು, ರಾತ್ರಿ ಅವರ ಅಭಿಮಾನಿಗಳು ಶ್ರೀನಿವಾಸ್ ಅವರ ಮೇಲೆ ಹಣದ ಸುರಿಮಳೆ ಹರಿಸಿದ್ದಾರೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read