BIG NEWS: ಬಿಜೆಪಿ ಸೇರಿದ ನಂತರ ಎಂಟಿಬಿ ನಾಗರಾಜ್ ಆಸ್ತಿಯಲ್ಲಿ ಶೇ. 23 ರಷ್ಟು ಹೆಚ್ಚಳ

ರಾಜ್ಯದ ಶ್ರೀಮಂತ ರಾಜಕಾರಣಿಗಳಲ್ಲಿ ಒಬ್ಬರಾದ ಎಂಟಿಬಿ ನಾಗರಾಜ್ ಅವರು ಚುನಾವಣಾ ಅಫಿಡವಿಟ್‌ನಲ್ಲಿ ತಮ್ಮ ಒಟ್ಟು ಆಸ್ತಿ ಮೌಲ್ಯ 1,510 ಕೋಟಿ ರೂಪಾಯಿ ಎಂದು ಘೋಷಿಸಿಕೊಂಡಿದ್ದಾರೆ. ನಾಗರಾಜ್ ಅವರು 2023 ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಹೊಸಕೋಟೆ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಪಕ್ಷಾಂತರಗೊಂಡ ನಂತರ 2019 ರ ಉಪಚುನಾವಣೆಯಲ್ಲಿ ಎಂಟಿಬಿ ನಾಗರಾಜ್ ಹೊಸಕೋಟೆ ಕ್ಷೇತ್ರದಲ್ಲಿ ಸೋತಿದ್ದರು. ಇದೀಗ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗಿಳಿದಿದ್ದು ಘೋಷಿಸಿಕೊಂಡಿರುವ ಆಸ್ತಿಯಲ್ಲಿ ಕಳೆದ ಮೂರು ವರ್ಷದಲ್ಲಿ ಶೇ.23 ರಷ್ಟು ಏರಿಕೆಯಾಗಿದೆ.

ಅವರ ಅಫಿಡವಿಟ್ ಪ್ರಕಾರ ನಾಗರಾಜ್ 372 ಕೋಟಿ ಮೌಲ್ಯದ ಚರ ಆಸ್ತಿ ಮತ್ತು 792 ಕೋಟಿ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಅವರ ಪತ್ನಿ ಶಾಂತಮ್ಮ 163 ಕೋಟಿ ಮೌಲ್ಯದ ಚರ ಆಸ್ತಿ ಹಾಗೂ 274 ಸ್ಥಿರಾಸ್ತಿ ಹೊಂದಿದ್ದಾರೆ.

ಎಂಟಿಬಿ ನಾಗರಾಜ್‌ ಅವರ ಬಳಿ 1.72 ಕೋಟಿ ಮೌಲ್ಯದ ಹಲವು ಐಷಾರಾಮಿ ಕಾರುಗಳಿವೆ. ಅವರ ಪತ್ನಿಯ ಹೆಸರಿನಲ್ಲಿರುವ ಕಾರುಗಳ ಮೌಲ್ಯ 1.33 ಕೋಟಿ ರೂ. ನಾಗರಾಜ್ ಅವರ ಬಳಿ 64 ಲಕ್ಷ ರೂ. ಶಾಂತಮ್ಮ ಅವರ ಬಳಿ 34 ಲಕ್ಷ ರೂ. ಹಣವಿದೆ.

ಎಂಟಿಬಿ ಬಳಿ 2.41 ಕೋಟಿ ಮೌಲ್ಯದ ಚಿನ್ನಾಭರಣ

• 28 ಲಕ್ಷ ಮೌಲ್ಯದ 996 ಗ್ರಾಂ ಚಿನ್ನ

• 98 ಲಕ್ಷ ಮೌಲ್ಯದ ವಜ್ರಗಳು

• 2.20 ಲಕ್ಷ ಮೌಲ್ಯದ 100.71 ಗ್ರಾಂ ಪ್ಲಾಟಿನಂ

• 1.1 ಕೋಟಿ ಮೌಲ್ಯದ 214.5 ಕೆಜಿ ಬೆಳ್ಳಿ

ಪತ್ನಿ ಶಾಂತಮ್ಮ ಬಳಿ 1.64 ಕೋಟಿ ಮೌಲ್ಯದ ಚಿನ್ನಾಭರಣ.

• 84 ಲಕ್ಷ ಮೌಲ್ಯದ 2.879 ಕೆಜಿ ಚಿನ್ನ

• 84 ಲಕ್ಷ ಮೌಲ್ಯದ ವಜ್ರಗಳು

• 2.63 ಲಕ್ಷ ಮೌಲ್ಯದ 74.550 ಗ್ರಾಂ ಪ್ಲಾಟಿನಂ

• 13.34 ಲಕ್ಷ ಮೌಲ್ಯದ 26.483 ಕೆಜಿ ಬೆಳ್ಳಿ.

2020 ರ ಎಂಎಲ್‌ಸಿ ಚುನಾವಣೆಯಲ್ಲಿ ನಾಗರಾಜ್ ಅವರ ನಿವ್ವಳ ಮೌಲ್ಯ 1,220 ಕೋಟಿ ರೂ. ಇತ್ತು. 2020 ಮತ್ತು 2023 ರ ನಡುವೆ ಬಿಜೆಪಿ ನಾಯಕ ಎಂಟಿಬಿ ಅವರ ಆಸ್ತಿಯಲ್ಲಿ ಶೇಕಡಾ 23.7 ರಷ್ಟು ಹೆಚ್ಚಳ ಕಂಡಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read