BIG NEWS: ರಾಜ್ಯದಲ್ಲಿ ಹೆಚ್ಚುತ್ತಿದೆ H1 N1 ಸೋಂಕು; ಬೆಂಗಳೂರಿನಲ್ಲಿಯೇ ಅತಿ ಹೆಚ್ಚು ಪ್ರಕರಣ ದಾಖಲು

ಬೆಂಗಳೂರು: ರಾಜ್ಯದಲ್ಲಿ ಮಳೆ ಅಬ್ಬರದ ನಡುವೆ ಒಂದೆಡೆ ಡೆಂಗ್ಯೂ ಹೆಚ್ಚಳವಾಗುತ್ತಿದ್ದರೆ ಮತ್ತೊಂದೆಡೆ ಮಂಕಿಪಾಕ್ಸ್ ಭೀತಿ ಶುರುವಾಗಿದೆ. ಈ ನಡುವೆ ಹೆಚ್ 1 ಎನ್ 1 ಪ್ರಕರಣಗಳು ಹೆಚ್ಚುತ್ತಿವೆ.

ರಾಜ್ಯಾದ್ಯಂತ ಹೆಚ್ 1 ಎನ್1 ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಈ ಬಾರಿ 7 ವರ್ಷಕ್ಕಿಂತ ದುಪ್ಪಟ್ಟು ಪ್ರಕರಣ ಪತ್ತೆಯಾಗಿದೆ. ಜುಲೈ 31ರವರೆಗೆ ರಾಜ್ಯಾದ್ಯಂತ 855 ಪ್ರಕರಣಗಳು ದಾಖಲಾಗಿವೆ. ಅದರಲ್ಲಿಯೂ ರಾಜಧಾನಿ ಬೆಂಗಳುರಿನ ಬಿಬಿಎಂಪಿ ವ್ಯಾಪ್ತಿಯಲಿಯೇ ಅತಿ ಹೆಚ್ಚು ಪ್ರಕರಣ ಪತ್ತೆಯಾಗಿದೆ.

ಬೆಂಗಳೂರಿನಲ್ಲಿ ಕಳೆದ ವರ್ಷ ಜುಲೈ ವೇಳೆ 118 ಪ್ರಕರಣಗಳು ದಾಖಲಾಗಿವೆ. ಈಗಾಗಲೇ ಮೈಸೂರಿನಲ್ಲಿ 15 ವರ್ಷದ ಬಾಲಕ ಹೆಚ್ 1 ಎನ್ 1 ಸೋಂಕಿಗೆ ಬಲಿಯಾಗಿದ್ದಾನೆ. ದೊಡ್ಡಬಳ್ಳಾಪುರದಲ್ಲಿ 48 ವರ್ಷದ ಮಹಿಳೆ ಸಾವನ್ನಪ್ಪಿದ್ದಾರೆ. ಇನ್ನೂ ಮೂವರಲ್ಲಿ ಪಾಸಿಟಿವ್ ಬಂದಿದ್ದು, ಅವರು ಕೂಡ ಮೃತಪಟ್ಟಿದ್ದಾರೆ. ಆದರೆ ಈ ಮೂವರು ಇತರೆ ರೋಗಗಳಿಂದ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ಒಟ್ಟಾರೆ ರಾಜ್ಯದಲ್ಲಿ ಹೆಚ್ 1 ಎನ್ 1 ಪ್ರಕರಣ ಹೆಚ್ಚುತ್ತಿದ್ದು, ಈ ಬಗ್ಗೆ ಜನರು ಜಾಗೃತಿ ವಹಿಸಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ.

ಉಸಿರಾಟದ ಸೋಂಕು, ತೀವ್ರ ಜ್ವರ, ಮೈ ಕೈ ನೋವು, ಕೆಮ್ಮು, ಗಂಟಲು ನೋವು, ಆಯಾಸ, ತಲೆನೋವು, ಉಸಿರಾಟದ ತೊಂದರೆ, ವಾಕರಿಕೆ, ವಾಂತಿ, ಅತಿಸಾರ ಇವು ಹೆಚ್ 1 ಎನ್ 1 ಸೋಂಕಿನ ಲಕ್ಷಣಗಳಾಗಿವೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read