Karnataka Assembly Session : ಕಿರುಚಾಡಿ ಸಮಯ ಹಾಳು ಮಾಡಬೇಡಿ, ಜನ ತಿಪ್ಪು ತಿಳಿದುಕೊಳ್ತಾರೆ : ಸದಸ್ಯರಿಗೆ ಸ್ಪೀಕರ್ ಯು.ಟಿ ಖಾದರ್ ಸೂಚನೆ

ಬೆಂಗಳೂರು : ಕಿರುಚಾಡಿ ಸಮಯ ಹಾಳುಮಾಡಬೇಡಿ, ಜನ ತಿಪ್ಪು ತಿಳಿದುಕೊಳ್ತಾರೆ ಎಂದು ವಿಧಾನಸಭೆಯಲ್ಲಿ ಸದಸ್ಯರಿಗೆ ಸ್ಪೀಕರ್ ಯು.ಟಿ ಖಾದರ್ ಸೂಚನೆ ನೀಡಿದರು.

ವಿಧಾನಸಭೆಯಲ್ಲಿ ಸದಸ್ಯರ ನಡುವೆ ಗದ್ದಲ ಉಂಟಾದಾಗ ಪ್ರತಿಕ್ರಿಯೆ ನೀಡಿದ ಸ್ಪೀಕರ್ ಯು.ಟಿ ಖಾದರ್ ನಾಡಿನ ಸಮಸ್ಯೆಗಳ ಬಗ್ಗೆ ಆರೋಗ್ಯಕರ ಚರ್ಚೆ ಮಾಡಬೇಕು ಅದನ್ನು ಬಿಟ್ಟು ಕಿರುಚಾಡಿ ಸಮಯ ಹಾಳುಮಾಡಬೇಡಿ, ಮಾಧ್ಯಮದಲ್ಲಿ ಜನ ಇದನ್ನು ನೋಡಿ ತಿಪ್ಪು ತಿಳಿದುಕೊಳ್ತಾರೆ, ಸುಮ್ಮನೆ ಈ ರೀತಿ ಕಿರುಚಾಡಿ ಸಮಯ ಹಾಳುಮಾಡಬೇಡಿ. ಮಾಧ್ಯಮಗಳಲ್ಲಿ ನೋಡಿದ ಜನ ತಪ್ಪು ತಿಳಿದುಕೊಳ್ಳುತ್ತಾರೆ. ಇವರು ಕಿರುಚಾಡುವುದಲ್ಲಿ ಕಾಲ ಕಳೆಯುತ್ತಾರೆಂಬ ಭಾವನೆ ಮೂಡುತ್ತದೆ. ಪದೇ ಪದೇ ಎದ್ದು ನಿಂತು ಕಿರುಚಾಡಬೇಡಿ ಎಂದು ಸದಸ್ಯರಿಗೆ ಸ್ಪೀಕರ್ ಯು.ಟಿ ಖಾದರ್ ಸೂಚನೆ ನೀಡಿದರು.

ಕಾಶ್ಮೀರದಿಂದ-ಕನ್ಯಾಕುಮಾರಿವರೆಗಿನ ದರೋಡೆಕೋರರು ಒಟ್ಟಿಗೆ ಸೇರುತ್ತಿದ್ದಾರೆ : ಯತ್ನಾಳ್ ಕಿಡಿ

ಬೆಂಗಳೂರು: ವಿಪಕ್ಷ ನಾಯಕರ ಮಹಾ ಮೈತ್ರಿಕೂಟ ಸಭೆ ಬಗ್ಗೆ ಬಿಜೆಪಿ ನಾಯಕರು ಸಹಜವಾಗಿಯೇ ವಾಗ್ದಾಳಿ ನಡೆಸಿದ್ದಾರೆ. ಅದರಲ್ಲಿಯೂ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಕಾಶ್ಮೀರದಿಂದ-ಕನ್ಯಾಕುಮಾರಿವರೆಗಿನ ದರೋಡೆಕೋರರೆಲ್ಲರೂ ಒಂದಾಗುತ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗರರೊಂದಿಗೆ ಮಾತನಾಡಿದ ಯತ್ನಾಳ್, ಕಾಶ್ಮೀರದಿಂದ-ಕನ್ಯಾಕುಮಾರಿವರೆಗಿನ ದರೋಡೆಕೋರರು ಒಟ್ಟಾಗಿ ಸೇರುತ್ತಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಮೋದಿಯವರನ್ನು ಸೋಲಿಸಲು ಒಗ್ಗೂಡುತ್ತಿದ್ದಾರೆ ಎಂದು ಹೇಳಿದರು.

ರಾಜ್ಯದಲ್ಲಿ ಜಾಮೀನು ಮೇಲೆ ಇರುವ ಎಲ್ಲಾ ಕುಟುಂಬಗಳು ಒಟ್ಟಿಗೆ ಸೇರಿವೆ. ಮತ್ತೆ ನರೇಂದ್ರ ಮೋದಿ ಬಂದ್ರೆ ಜೈಲೇ ಗತಿ ಎಂಬುದು ಅವರಿಗೆ ಗೊತ್ತಾಗಿದೆ. ಹಾಗಾಗಿ ಎಲ್ಲಾ ದರೋಡೆಕೋರರು ಒಟ್ಟಿಗೆ ಸೇರುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read