BIG NEWS: ಗ್ಯಾರಂಟಿ ಯೋಜನೆ ಚುನಾವಣಾ ಗಿಮಿಕ್ ಎಂದ ಕೃಷಿ ಸಚಿವ ಚಲುವರಾಯಸ್ವಾಮಿ ವಿಡಿಯೋ ವೈರಲ್

ಬೆಂಗಳೂರು: ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಕೃಷಿ ಸಚಿವರೇ ವ್ಯಂಗ್ಯವಾಗಿ ಮಾತನಾಡಿರುವ ವಿಡಿಯೋ ಸಾಮಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಕೃಷಿ ಸಚಿವರೇ ಮಾತನಾಡಿದ್ದಾರೆ ಎಂಬ ವಿಡಿಯೋ ವೈರಲ್ ಆಗಿದ್ದು, ಉಚಿತ ಭರವಸೆಗಳೆಲ್ಲ ಕೇವಲ ಚುನಾವಣಾ ಗಿಮಿಕ್, ಚುನಾವಣೆಯಲ್ಲಿ ಗೆದ್ದು ಅಧಿಕಾರ ಹಿಡಿಯುವ ಉದ್ದೇಶಕ್ಕೆ ಇಂತಹ ಗ್ಯಾರಂಟಿಗಳನ್ನು ಘೋಷಿಸಲಾಗಿದೆ ಅಷ್ಟೇ ಎಂದು ಹೇಳಿರುವುದು ಬಹಿರಂಗವಾಗಿದೆ.

ಉಚಿತ ಯೋಜನೆ ಘೋಷಿಸುವ ಬಗ್ಗೆ ದೇಶದಲ್ಲಿ ಚರ್ಚೆ ಆಯಿತು. ನಾವೂ ಚರ್ಚೆ ಮಾಡಿದೆವು. ಫ್ರೀ ಫ್ರೀ ಅಂತ ಹೋದರೆ ಮುಂದೆ ಎಲ್ಲಿಗೆ ಹೋಗಿ ನಿಲ್ಲಬಹುದು. ಇದು ಒಳ್ಳೆಯದಲ್ಲ ಎಂದು ಚರ್ಚಿಸಿದೆವು. ಅಧಿಕಾರ ಸಿಕಿದರೆ ನಾವೂ ಏನಾದರೂ ಮಾಡಬಹುದು ಎಂಬ ದೃಷ್ಟಿ ಬಂದಾಗ ಅಂದಿಗೆ ರಿಸಲ್ಟ್ ಅನಿವಾರ್ಯವಾಗುತ್ತೆ. ರಿಸಲ್ಟ್ ಬರಬೇಕು ಎಂದಾಗ ಈ ರೀತಿ ಚೀಪ್ ಪಾಪ್ಯುಲಾರಿಟಿ, ಇಲ್ಲದ್ದು, ಬಲ್ಲದ್ದು ಎಲ್ಲ ಮಾಡ್ತೀವಿ. ಆದರೆ ನಮ್ಮ ಮನಸ್ಸಿಗೆ ಇಷ್ಟ ಆಗುತ್ತೊ ಇಲ್ವೋ, ಸಿದ್ದರಾಮಯ್ಯನವರ ಮನಸ್ಸಿಗೆ ಇಷ್ಟ ಆಗುತ್ತೋ ಇಲ್ವೋ ಕೆಲವೊಂದು ಮಾಡಿಕೊಂಡು ಹೋಗಬೇಕಾಗುತ್ತೆ. ಕೆಲವೊಂದನ್ನು ಒಪ್ಪಿಕೊಳ್ಳಬೇಕಾಗುತ್ತದೆ ಎಂದು ಹೇಳಿದ್ದಾರೆ.

https://twitter.com/Bobbycal/status/1666110099457466369?ref_src=twsrc%5Etfw%7Ctwcamp%5Etweetembed%7Ctwterm%5E1666110099457466369%7Ctwgr%5E5091bac8d5c5c84bfa417e814e5bd734ae7c51f1%7Ctwcon%5Es1_&ref_url=https%3A%2F%2Ftv9kannada.com%2Fkarnataka%2Fkarnataka-agriculture-minister-cheluvarayaswamy-of-congress-admits-that-free-guarantee-scheme-was-an-election-gimmick-gsp-595627.html

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read