ಕಿರುತೆರೆ ಹಾಗೂ ಬೆಳ್ಳಿ ತೆರೆಯಲ್ಲಿ ಮಿಂಚುತ್ತಿರುವ ನಟಿ ಸ್ಪಂದನ ಸೋಮಣ್ಣ ಇತ್ತೀಚಿಗಷ್ಟೇ ಅನುಬಂಧ ಅವಾರ್ಡ್ ನಲ್ಲಿ ತಮ್ಮ ಬೋಲ್ಡ್ ಲುಕ್ನಿಂದ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದರು. ಇದೀಗ ಈ ಫೋಟೋಗಳನ್ನು ಸ್ಪಂದನ ಸೋಮಣ್ಣ ತಮ್ಮ instagram ಖಾತೆಯಲ್ಲಿ ಅಪ್ಲೋಡ್ ಮಾಡಿದ್ದು, ನೆಟ್ಟಿಗರಿಂದ ಲೈಕ್ಸ್ ಹಾಗೂ ಕಮೆಂಟ್ಸ್ ಗಳ ಸುರಿಮಳೆಯೇ ಹರಿದು ಬಂದಿದೆ
ಪ್ರಮೋದ್ ಜಯ ನಿರ್ದೇಶನದ ರೋಮ್ಯಾಂಟಿಕ್ ಲವ್ ಸ್ಟೋರಿ ಕಥಾಧಾರಿತ ‘ದಿಲ್ ಖುಷ್’ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ನಟಿ ಸ್ಪಂದನ ಸೋಮಣ್ಣ ಇತ್ತೀಚಿಗೆ ‘ಕರಿಮಣಿ’ ಧಾರವಾಹಿಯಲ್ಲಿ ಬಿಜಿಯಾಗಿದ್ದಾರೆ. ಕಲರ್ಸ್ ಕನ್ನಡ ಅನುಬಂಧ ಅವಾರ್ಡ್ ನಲ್ಲಿ ಜಿಯೋ ಸಿನಿಮಾ ಜೋಡಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.