ಕಾರವಾರ: ರಾಜ್ಯದ ಅತಿದೊಡ್ಡ ಉತ್ಸವಗಳಲ್ಲಿ ಒಂದಾದ ಕರಾವಳಿ ಉತ್ಸವವನ್ನು ಮುಂದೂಡಿ ಉತ್ತರ ಕನ್ನಡ ಜಿಲ್ಲಾಡಳಿಯ ಅಧಿಕೃತ ಆದೇಶ ಹೊರಡಿಸಿದೆ.
ದೇಶದ ಅತಿದೊಡ್ಡ ನೌಕಾನೆಲೆ ಕಾರವಾರದ ಸೀಬರ್ಡ್ ನೌಕಾನೆಲೆಯಿಂದ ಕೂಗಳತೆ ದೂರದಲ್ಲಿಯೇ ಮೇ 4ರಿಂದ 9ರವರೆಗೆ 5 ದಿನಗಳ ಕಾಲ ಅದ್ದೂರಿ ಕರಾವಳಿ ಉತ್ಸವಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ ಪೆಹಲ್ಗಾಮ್ ದಾಳಿ ಬೆನ್ನಲ್ಲೇ ಸೀಬರ್ಡ್ ನೌಕಾನೆಲೆ ಸೇರಿದಂತೆ ಜಿಲ್ಲೆಯ ಪ್ರಮುಖ ಸ್ಥಳಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ಭದ್ರತೆ ಹೆಚ್ಚಿಸಲಾಗಿದೆ. ಭದ್ರತೆಯ ದೃಷ್ಟಿಯಿಂದ ಕರ್ವಾವಳಿ ಉತ್ಸವ ಮುಂದೂಡಲಾಗಿದೆ.
ಸುಮಾರು 10 ಕೋಟಿ ವೆಚ್ಚದಲ್ಲಿ ಉತ್ಸವ ಮಾಡಲು ತೀರ್ಮಾನಿಸಲಾಗಿತ್ತು. ಸುರಕ್ಷತೆಯ ದೃಷ್ಟಿಂದ ಗೃಹ ಇಲಾಖೆ ಜಿಲ್ಲಾಡಳಿತಕ್ಕೆ ಪತ್ರ ರವಾನಿಸಿತ್ತು. ಸುರಕ್ಷತಾ ಕ್ರಮ ಕೈಗೊಳ್ಳಬೇಕಾದ ಇಂತಹ ಸಂದರ್ಭದಲ್ಲಿ ಕರ್ವಾವಳಿ ಉತ್ಸವ ಬೇಕಾ? ಎಂದು ಪ್ರಶ್ನಿಸಿತ್ತು. ಗೃಹ ಇಲಾಖೆ ಸಲಹೆಯಂತೆ ಭದ್ರತಾ ದೃಷ್ಟಿಂದ ಕರಾವಳಿ ಉತ್ಸವ ಮೊಟಕುಗೊಳಿಸಿ ಆದೇಶ ಹೊರಡಿಸಲಾಗಿದೆ. ಜಿಲ್ಲೆಯ ಪ್ರಮುಖ ಸ್ಥಳಗಳಲ್ಲಿ ಹೆಚ್ಚಿನ ಭದ್ರತೆ ನಿಯೋಜಿಸಲಾಗಿದೆ.