ಮೈಸೂರು: ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರಾ ಚಾಪ್ಟರ್ -1 ವಿಶ್ವದಾದ್ಯಂತ ಬಿಡುಗಡೆಯಾಗಿದ್ದು, ಬಹುಭಾಷೆಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ನಡುವೆ ಮಾಇ ಸಂಸದ ಪ್ರತಾಪ್ ಸಿಂಹ ಕಾಂತಾರಾ ಸಿನಿಮಾ ವೀಕ್ಷಣೆಗಾಗಿ ಬಿಜೆಪಿ ಕಾರ್ಯಕರ್ತರಿಗೆ ಆಹ್ವಾನಿಸಿದ್ದಾರೆ.
ಬಿಜೆಪಿ ಕಾರ್ಯಕರ್ತರಿಗೆ ಕಾಂತಾರಾ ಸಿನಿಮಾಗಾಗಿ ಇಡೀ ಥಿಯೇಟರ್ ಬುಕ್ ಮಾಡಿದ್ದು, ಇಂದು ಸಂಜೆ 4 ಗಂಟೆಗೆ ಡಿಆರ್ ಸಿಗೆ ಬರುವಂತೆ ಆಹ್ವಾನಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿರುವ ಪ್ರತಾಪ್ ಸಿಂಹ ಎಲ್ಲರಿಗೂ ಕಾಂತಾರಾ ಸಿನಿಮಾಗಾಗಿ ಟಿಕೆಟ್ ಬುಕ್ ಮಾಡಿದ್ದೇನೆ. ಕಾರ್ಯಕರ್ತರೆಲ್ಲರೂ ಒಡಗೂಡಿ ಕಾಂತಾರಾ ನೋಡೋಣ. ಮೈಸೂರಿನ ಡಿಆರ್ ಸಿಯಲ್ಲಿ ಫುಲ್ ಸ್ಕ್ರೀನ್ ಬುಕ್ ಮಾಡಿದ್ದೇನೆ. ಸಂಜೆ ನಾಲ್ಕು ಗಂಟೆಗೆ ಶೋ ಶುರುವಾಗಲಿದೆ ಎಲ್ಲರೂ ಬನ್ನಿ ಎಂದು ಆಹ್ವಾನಿಸಿದ್ದಾರೆ.