ಬೆಂಗಳೂರು : ನಟ ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ‘ಕಾಂತಾರ ಚಾಪ್ಟರ್ 1’ ಚಿತ್ರ ವಿಶ್ವದಾದ್ಯಂತ ಭರ್ಜರಿ ಓಪನಿಂಗ್ ಪಡೆದುಕೊಂಡಿದೆ. ಬಾಕ್ಸ್ ಆಫೀಸ್ ನಲ್ಲಿ ಕಾಂತಾರ ಚಾಪ್ಟರ್ 1 ಅಬ್ಬರದ ಗಳಿಕೆ ಮಾಡಿದ್ದು, ಎರಡೇ ದಿನಕ್ಕೆ ಬರೋಬ್ಬರಿ 100 ಕೋಟಿ ಕಲೆಕ್ಷನ್ ಮಾಡಿದೆ.
ಹೌದು., ಸಿನಿಮಾ ಬಿಡುಗಡೆ ಆದ ಮೊದಲ ದಿನವೇ ಭಾರತದಲ್ಲಿ 45 ಕೋಟಿ ರೂ., ವಿದೇಶಗಳಲ್ಲಿ 10 ಕೋಟಿ ರೂ. ಗಳಿಸಿದ್ದು, ಇದೀಗ 100 ಕೋಟಿ ಕ್ಲಬ್ ಗೆ ಸೇರಿದೆ. .ಈ ಚಿತ್ರ ಮೊದಲ ದಿನ 62 ಕೋಟಿ ರೂ ಕಲೆಕ್ಷನ್ ಮಾಡಿತ್ತು, ಈ ಸಿನಿಮಾ ಶುಕ್ರವಾರ 43.65 ಕೋಟಿ ರೂ ಕಲೆಕ್ಷನ್ ಮಾಡಿದೆ. ಭಾರತದಲ್ಲಿ ಒಟ್ಟು 6500 ಸ್ಕ್ರೀನ್ ಗಳಲ್ಲಿ ಸುಮಾರು 12, 511ಕ್ಕೂ ಹೆಚ್ಚು ಶೋಗಳು ಪ್ರದರ್ಶನ ಕಂಡಿವೆ.
ದೇಶಾದ್ಯಂತ ಹೌಸ್ ಫುಲ್ ಪ್ರದರ್ಶನ ಕಾಣುತ್ತಿರುವ ‘ಕಾಂತಾರ ಚಾಪ್ಟರ್ 1’ ಚಿತ್ರಕ್ಕೆ ಕರ್ನಾಟಕ ಮಾತ್ರವಲ್ಲದೇ ಹೊರ ರಾಜ್ಯಗಳಲ್ಲಿ, ದೇಶಾದ್ಯಂತ ಪ್ರೇಕ್ಷಕರು ಫಿದಾ ಆಗಿದ್ದಾರೆ. ಅಮೆರಿಕ ಸೇರಿದಂತೆ 30 ದೇಶಗಳಲ್ಲಿ ಸಿನಿಮಾ ಬಿಡುಗಡೆಯಾಗಿದೆ.