ಮಹಾ ಕುಂಭಮೇಳಕ್ಕೆ ಹೋಗಿದ್ದ ಕನ್ನಡಿಗರಿಗೆ ಶಾಕ್: ತಾಂತ್ರಿಕ ದೋಷದಿಂದ ವಿಮಾನ ವಿಳಂಬ: ಅನ್ನ, ನೀರು ಇಲ್ಲದೆ ಪರದಾಟ

ಪ್ರಯಾಗ್ ರಾಜ್: ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳಕ್ಕೆ ತೆರಳಿದ್ದ ಕನ್ನಡಿಗರು ಪರದಾಟ ನಡೆಸಿದ್ದಾರೆ.

ಪ್ರಯಾಗ್ ರಾಜ್ ನಿಂದ ಬೆಂಗಳೂರಿಗೆ ತೆರಳಬೇಕಿದ್ದ ಸ್ಪೈಸ್ ಜೆಟ್ ವಿಮಾನ ತಾಂತ್ರಿಕ ದೋಷದಿಂದಾಗಿ ವಿಳಂಬವಾಗಿದೆ. ಸರಿಯಾದ ಸಮಯಕ್ಕೆ ವಿಮಾನ ಇಲ್ಲದೆ ಜನರು ಪರದಾಟ ನಡೆಸಿದ್ದಾರೆ. ಮಧ್ಯಾಹ್ನ 2 ಗಂಟೆಗೆ ಟೇಕಾಫ್ ಆಗಬೇಕಿದ್ದ ವಿಮಾನವನ್ನು ರದ್ದು ಮಾಡಲಾಗಿದೆ. ವಿಮಾನ ನಿಲ್ದಾಣ ಸಿಬ್ಬಂದಿ ಗಂಟೆಗೊಂದು ಮಾಹಿತಿ ಕೊಡುತ್ತಿದ್ದಾರೆ. ಸರಿಯಾದ ವ್ಯವಸ್ಥೆ ಇಲ್ಲದೆ ಕನ್ನಡಿಗರು ಪರದಾಡುವಂತಾಗಿದೆ. ಸಂಜೆ 7.30 ಆದರೂ ವಿಮಾನ ಇಲ್ಲದಂತಾಗಿದೆ. ವಿಮಾನವೂ ಇಲ್ಲದೆ ಊಟವೂ ಇಲ್ಲದೆ ರಾಜ್ಯದ ಯಾತ್ರಾರ್ಥಿಗಳು ಏರ್ ಪೋರ್ಟ್ ನಲ್ಲಿ ಪ್ರತಿಭಟನೆ ನಡೆಸಿದ್ದಾರೆ.

ವಿಮಾನ 7 ಗಂಟೆ ವಿಳಂಬವಾಗಿದ್ದು, ಸರಿಯಾದ ಮಾಹಿತಿ ಇಲ್ಲದೇ ಮಹಾ ಕುಂಭಮೇಳಕ್ಕೆ ಹೋದ ಕನ್ನಡಿಗರಿಗೆ ಶಾಕ್ ಆಗಿದೆ. ಪ್ರಯಾಗ್ ರಾಜನಿಂದ ಬೆಂಗಳೂರಿಗೆ ಬರಲು ಪರದಾಟ ನಡೆಸುವಂತಾಗಿದೆ. ಮಧ್ಯಾಹ್ನ ಹೊರಡಬೇಕಿದ್ದ ರಾತ್ರಿಯಾದರೂ ಹೊರಡದ ಕಾರಣ ಕನ್ನಡಿಗ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read