ಬೆಂಗಳೂರು: ಕನ್ನಡಿಗ ಕೊರಿಯರ್ ಬಾಯ್ ಓರ್ವರನ್ನು ಪಶ್ಚಿಮ ಬಂಗಾಳ ಮೂಲದ ವ್ಯಕ್ತಿಯೊಬ್ಬ ಅವಾಚ್ಯವಾಗಿ ನಿಂದಿಸಿರುವ ಘಟನೆ ನಡೆದಿದೆ.
ಪಶ್ಚಿಮ ಬಂಗಾಳ ಮೂಲದ ಮಿಥುನ್ ಸರ್ಕಾರ್ ಎಂಬಾತ ಫೋನ್ ಮೂಲಕ ಕನ್ನಡಿಗ ಕೊರಿಯರ್ ಬಾಯ್ ಗೆ ಅವಾಚ್ಯ ಪದಗಳಿಂದ ನಿಂದಿಸಿದ್ದಾನೆ. ಹಿಂದಿವಾಲಾ ಮಿಥುನ್ ವಿರುದ್ಧ ಕೊರಿಯರ್ ಬಾಯ್ ದೂರು ನೀಡಿದ್ದು, ಬೊಮ್ಮನಹಳ್ಳಿ ಠಾಣೆಯಲ್ಲಿ ಮಿಥುನ್ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.