ಕನ್ನಡ ಸಾಹಿತ್ಯ ಪರಿಷತ್ ಸರ್ವ ಸದಸ್ಯರ ಸಭೆ ಮತ್ತೆ ರದ್ದು: ಸಹಕಾರ ಇಲಾಖೆ ಆದೇಶ

ಬಳ್ಳಾರಿ: ಬಳ್ಳಾರಿ ಜಿಲ್ಲೆಯ ಸಂಡೂರಿನಲ್ಲಿ ಜೂನ್ 29 ರಂದು ನಡೆಯಬೇಕಿದ್ದ ಕನ್ನಡ ಸಾಹಿತ್ಯ ಪರಿಷತ್ ನ 2023-24ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ರದ್ದುಪಡಿಸಲಾಗಿದೆ.

ಸಹಕಾರ ಇಲಾಖೆಯ ಎರಡನೇ ವಲಯದ ಸಹಕಾರ ಸಂಘಗಳ ಉಪ ನಿಬಂಧಕ ಹಾಗೂ ಸಂಘಗಳ ನೊಂದಣಾಧಿಕಾರಿ ಈ ಕುರಿತಾಗಿ ಆದೇಶಿಸಿದ್ದಾರೆ. ಇದರೊಂದಿಗೆ ಸಭೆ ಎರಡನೇ ಬಾರಿಗೆ ರದ್ದು ಮಾಡಿದಂತಾಗಿದೆ. ಸಭೆಯ ಕುರಿತು ಸಂಘದ ಅಜೀವ ಸದಸ್ಯರಿಗೆ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು ನೋಟಿಸ್ ಕಳುಹಿಸಿಲ್ಲ. ಸಂಘದ ಸದಸ್ಯರು ತೆರಳಲು ಕಷ್ಟ ಸಾಧ್ಯವಾದ ಬಳ್ಳಾರಿ ಜಿಲ್ಲೆ ಸಂಡೂರಿನಲ್ಲಿ ವಾರ್ಷಿಕ ಸರ್ವ ಸದಸ್ಯರ ಸಭೆ ನಡೆಸಲು ಉದ್ದೇಶಿಸಲಾಗಿದೆ. ಸಂಘದ ಲೆಕ್ಕಪತ್ರಗಳ ಮಂಡನೆಯನ್ನು ವಾಮಮಾರ್ಗದ ಮೂಲಕ ಅನುಮೋದಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿ ಜಾಣಗೆರೆ ವೆಂಕಟರಾಮಯ್ಯ, ಡಾ. ವಸುಂಧರಾ ಭೂಪತಿ ಸೇರಿ ಇತರರು ದೂರು ಸಲ್ಲಿಸಿದ್ದರು.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read