ರಾಜ್ಯದ ಎಲ್ಲಾ ಬ್ಯಾಂಕ್ ಗಳಲ್ಲಿ ಇನ್ಮುಂದೆ ‘ಕನ್ನಡ’ ಕಡ್ಡಾಯ : ಹೊಸ ನಿಯಮ ಜಾರಿಗೆ ಸರ್ಕಾರ ಸಿದ್ದತೆ

ಬೆಂಗಳೂರು : ರಾಜ್ಯದ ಎಲ್ಲಾ ಬ್ಯಾಂಕ್ ಗಳಲ್ಲೂ ಇನ್ಮುಂದೆ ಕನ್ನಡ ಕಡ್ಡಾಯವಾಗಿದ್ದು, ಹೊಸ ನಿಯಮ ಜಾರಿಗೆ ತರಲು ಸರ್ಕಾರ ಸಿದ್ದತೆ ನಡೆಸಿದೆ.

ಹೌದು. ರಾಜ್ಯದ ಎಲ್ಲಾ ಬ್ಯಾಂಕುಗಳಲ್ಲಿ ಉದ್ಯೋಗಿಗಳು ಗ್ರಾಹಕರೊಂದಿಗೆ ಕನ್ನಡದಲ್ಲಿ ವ್ಯವಹರಿಸುವುದು ಕಡ್ಡಾಯವಾಗಿದೆ. ಈ ಮೂಲಕ ಮಹತ್ವದ ಕ್ರಮ ಜಾರಿಗೊಳ್ಳಲು ಸರ್ಕಾರ ಸಿದ್ದತೆ ನಡೆಸಿದೆ.ಈ ಹಿನ್ನೆಲೆ ಕನ್ನಡ ಮತ್ತು ಸಂಸ್ಕೃತ ಇಲಾಖೆಯಲ್ಲಿ ಈಗಾಗಲೇ ಒಂದೆರಡು ಸುತ್ತಿನ ಗಂಭೀರ ಚರ್ಚೆಗಳು ನಡೆದಿದೆ, ಸೂಕ್ತ ನಿಯಮಾವಳಿ ರೂಪಿಸಲು ಚಿಂತನೆ ನಡೆಸಲಾಗಿದೆ. ನಿಯಮಗಳು ರೂಪುಗೊಂಡ ಬಳಿಕ ಸರ್ಕಾರದಿಂದ ಅಧಿಕೃತ ಅಧಿಸೂಚನೆ ಹೊರಬೀಳಲಿದೆ.

ರಾಜ್ಯದ ಎಲ್ಲಾ ಸರ್ಕಾರಿ, ಸರ್ಕಾರೇತರ ಸಂಘ, ಬ್ಯಾಂಕುಗಳಲ್ಲಿ ಕನ್ನಡ ಬಳಕೆ ಕಡ್ಡಾಯವಾಗಲಿದೆ. ಕನ್ನಡ ಗೊತ್ತಿಲ್ಲದ ಜನರಿಗೆ ಬ್ಯಾಂಕ್ ಕನ್ನಡ ಕಲಿಕಾ ಘಟಕ ರಚಿಸಬೇಕು. ಸರ್ಕಾರ ಬೇಕಿದ್ದರೆ ಅಗತ್ಯ ಬೋಧಕ ಅಧ್ಯಯನ ಸಾಮಗ್ರಿ ನೀಡಲಿದೆ. ಇದಕ್ಕೆ ತಗುಲುವ ವೆಚ್ಚವನ್ನು ಆಯಾ ಬ್ಯಾಂಕ್ ವಹಿಸಬೇಕು ಎಂಬ ನಿಯಮಾವಳಿ ತರಲಾಗುತ್ತಿದೆ ಎನ್ನಲಾಗಿದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read