ಇನ್ನು ಕನ್ನಡದಲ್ಲೂ ವ್ಯಾಟಿಕನ್ ಸುದ್ದಿ ಲಭ್ಯ: 53ನೇ ಭಾಷೆಯಾಗಿ ಕನ್ನಡ ಸೇರ್ಪಡೆ

ಕ್ರೈಸ್ತರ ಧರ್ಮಗುರು ಪೋಪ್ ಇರುವ ಸ್ವತಂತ್ರ ದೇಶ ವ್ಯಾಟಿಕನ್ ಸಿಟಿ ಕನ್ನಡ ಭಾಷೆಗೂ ಮಾನ್ಯತೆ ನೀಡಿದೆ. ವ್ಯಾಟಿಕನ್ ರೇಡಿಯೋ – ವ್ಯಾಟಿಕನ್ ನ್ಯೂಸ್ ಕನ್ನಡವನ್ನು 53 ನೇ ಭಾಷೆಯಾಗಿ ಸೇರಿಸಿದೆ. ಇದರಲ್ಲಿ ಪಾಪಲ್, ವ್ಯಾಟಿಕನ್ ಮತ್ತು ಚರ್ಚ್ ಸುದ್ದಿಗಳ ಪ್ರಸಾರವನ್ನು ಒದಗಿಸಲಾಗುವುದು. 35 ಮಿಲಿಯನ್ ಭಾರತೀಯರ ಮಾತೃಭಾಷೆಯಲ್ಲಿ ಸುವಾರ್ತೆ ಘೋಷಣೆಯನ್ನು ನೀಡಲಿದೆ ಎಂದು ಹೇಳಲಾಗಿದೆ.

ಕನ್ನಡ ವ್ಯಾಟಿಕನ್ ರೇಡಿಯೊದ 53 ನೇ ಭಾಷೆಯಾಗಿದೆ. ವ್ಯಾಟಿಕನ್ ನ್ಯೂಸ್ ಭಾರತದಲ್ಲಿ ಲಕ್ಷಾಂತರ ಜನರು ಮಾತನಾಡುವ ಈ ಭಾಷೆಯ ಸುದ್ದಿಗಳು ವ್ಯಾಟಿಕನ್ ನ್ಯೂಸ್ ವೆಬ್ ಪೋರ್ಟಲ್‌ನಲ್ಲಿ ಲಭ್ಯವಿರುತ್ತವೆ.

ಡಿಕ್ಯಾಸ್ಟರಿ ಫಾರ್ ಕಮ್ಯುನಿಕೇಶನ್ ಮತ್ತು ಭಾರತದ ಕರ್ನಾಟಕ ರಾಜ್ಯದಲ್ಲಿರುವ ಬೆಂಗಳೂರಿನ ಆರ್ಚ್‌ಡಯಸೀಸ್ ನಡುವಿನ ಸಹಯೋಗದಿಂದ ಈ ಕ್ರಮ ಕೈಗೊಳ್ಳಲಾಗಿದೆ.

“ಕನ್ನಡದಲ್ಲಿ ಈ ಪುಟಗಳನ್ನು ಪ್ರಾರಂಭಿಸಲು ನನಗೆ ಸಂತೋಷವಾಗಿದೆ” ಎಂದು ಬೆಂಗಳೂರಿನ ಆರ್ಚ್‌ಬಿಷಪ್ ಪೀಟರ್ ಮಚಾಡೊ ಹೇಳಿದರು. “ಪೋಪ್, ವ್ಯಾಟಿಕನ್, ಸಾರ್ವತ್ರಿಕ ಚರ್ಚ್ ಮತ್ತು ಪ್ರಪಂಚದ ಕುರಿತಾದ ಸುದ್ದಿಗಳು ಕರ್ನಾಟಕದ ಸ್ಥಳೀಯ ಚರ್ಚ್‌ಗೆ ಹೆಚ್ಚಿನ ಆಸಕ್ತಿ ಮತ್ತು ಪ್ರಾಮುಖ್ಯತೆಯನ್ನು ನೀಡುತ್ತದೆ ಎಂದು ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read