ಪಠಾಣ್​ ಸಕ್ಸಸ್​: ನಟಿಯರಾದ ಕಂಗನಾ, ಉರ್ಫಿ ನಡುವೆ ಟ್ವೀಟ್​ ಸಮರ…!

ಶಾರುಖ್ ಖಾನ್ ನಟನೆಯ ‘ಪಠಾಣ್’ ಸೂಪರ್​ಹಿಟ್​ ಆದ ಬೆನ್ನಲ್ಲೇ ನಟಿ ಕಂಗನಾ ರಣಾವತ್, ತಮ್ಮ ಟ್ವಿಟರ್​ ಮೂಲಕ ಇದರ ಬಗ್ಗೆ ಕಿಡಿ ಕಾರಿದ್ದರು. “ಈ ದೇಶವು ಎಲ್ಲಾ ಖಾನ್‌ಗಳನ್ನು ಮಾತ್ರ ಹಾಗೂ ಕೆಲವೊಮ್ಮೆ ಮಾತ್ರ, ಕೇವಲ ಖಾನ್‌ಗಳನ್ನು ಮಾತ್ರ ಪ್ರೀತಿಸುತ್ತದೆ….… ಮುಸ್ಲಿಂ ನಟಿಯರ ಮೇಲೆ ಗೀಳನ್ನು ಹೊಂದಿದೆ” ಎಂದು ಕಂಗನಾ ಹೇಳಿದ್ದರು. ಇದಕ್ಕೆ ಸಂಬಂಧಿಸಿದಂತೆ ಉರ್ಫಿ ಮತ್ತು ಕಂಗನಾ ನಡುವೆ ಟ್ವೀಟ್​ ವಾರ್​ ಶುರುವಾಗಿದೆ.

ಕಂಗನಾ ಟ್ವೀಟ್​ಗೆ ಉರ್ಫಿ ಜಾವೇದ್‌ ಅವರು ತಿರುಗೇಟು ನೀಡಿದ್ದು, “ಓಹ್. ಮುಸ್ಲಿಂ ನಟ, ಹಿಂದು ನಟ ಅಂತ ಏನು ವಿಂಗಡಣೆ? ಧರ್ಮದಿಂದ ಕಲೆ ವಿಭಾಗವಾಗಿಲ್ಲ. ಕಲಾವಿದರು ಮಾತ್ರ ಇರುತ್ತಾರೆ” ಎಂದಿದ್ದಾರೆ.

ಇದಕ್ಕೆ ಕಂಗನಾ ಪುನಃ ರಿಪ್ಲೈ ಮಾಡಿದ್ದು, “ಹೌದು ಮೈ ಡಿಯರ್ ಉರ್ಫಿ. ನಮ್ಮಲ್ಲಿ ಏಕರೂಪ ನಾಗರಿಕ ಸಂಹಿತೆ ಬರುವವರೆಗೂ ಆದರ್ಶ ಜಗತ್ತು ನಿರ್ಮಾಣ ಸಾಧ್ಯವಿಲ್ಲ. ಈ ರಾಷ್ಟ್ರವು ಇಲ್ಲಿಯವರೆಗೂ ಸಂವಿಧಾನದ ಮೂಲಕವೇ ವಿಭಜನೆಯಾಗಿದೆ. ಏಕರೂಪ ನಾಗರಿಕ ಸಂಹಿತೆ ಬರದಿದ್ದರೆ ವಿಭಜನೆ ಮುಂದುವರೆಯುತ್ತದೆ. ನಾವೆಲ್ಲರೂ ಪ್ರಧಾನಿ ನರೇಂದ್ರ ಮೋದಿ ಅವರ 2024ರ ಪ್ರಣಾಳಿಕೆಯಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು ಸೇರಿಸಲು ಒತ್ತಾಯಿಸೋಣ” ಎಂದಿದ್ದಾರೆ.

ಇಷ್ಟಕ್ಕೆ ಸುಮ್ಮನಾಗಲಿಲ್ಲ. ಉರ್ಫಿ ಪುನಃ ಟ್ವೀಟ್​ ಮಾಡಿದ್ದು, “ಏಕರೂಪ ಬಟ್ಟೆಯು ನನಗೆ ಕೆಟ್ಟ ಐಡಿಯಾವಾಗಿದೆ. ನನ್ನ ಬಟ್ಟೆಗಳಿಂದಲೇ ನಾನು ಜನಪ್ರಿಯಳು” ಎಂದು ತಿರುಗೇಟು ಕೊಟ್ಟಿದ್ದಾರೆ.

“ಭಾರತದಲ್ಲಿ ಅಕ್ಕ ಮಹಾದೇವಿ ಎಂಬ ರಾಣಿ ಇದ್ದರು. ಆಕೆಗೆ ಭಗವಂತ ಶಿವನ ಮೇಲೆ ಅಪಾರ ಪ್ರೀತಿ. ಇದನ್ನು ವಿರೋಧಿಸಿದ ಆಕೆಯ ಪತಿ, ಶಿವನನ್ನೇ ಪ್ರೀತಿಸುವುದಾದರೆ, ನನ್ನಿಂದ ಏನನ್ನೂ ತೆಗೆದುಕೊಂಡು ಹೋಗಬಾರದೆಂದು ನ್ಯಾಯ ಪಂಚಾಯಿತಿ (ಅನುಭವ ಮಂಟಪ) ಎದುರು ವಾದಿಸಿದ್ದರು. ಆ ಕ್ಷಣವೆ ತನ್ನೆಲ್ಲಾ ಉಡುಪುಗಳನ್ನು ಕಿತ್ತೊಗೆದು ಅಲ್ಲಿಂದ ಹೊರಟುಹೋದ ಆಕೆ ಮುಂದೆಂದು ಮೈ ಮುಚ್ಚುವ ಸಲುವಾಗಿ ಬಟ್ಟೆ ತೊಡಲಿಲ್ಲ” ಎಂದು ಕಂಗನಾ ರಣಾವತ್ ಹೇಳಿದ್ದಾರೆ.

https://twitter.com/KanganaTeam/status/1619347816501096449?ref_src=twsrc%5Etfw%7Ctwcamp%5Etweetembed%7Ctwterm%5

https://twitter.com/uorfi_/status/1619912350919958528?ref_src=twsrc%5Etfw%7Ctwcamp%5Etweetembed%7Ctwterm%5E1619912350919958528%7Ctwgr%5E3e55e5fdabbe2746bb0fd35a6219bfebdd9e7b19%7Ctwcon%5Es1_&ref_url=https%3A%2F%2Fwww.ndtv.com%2Foffbeat%2Fshah-rukh-khans-pathaan-release-actor-uorfi-javed-quips-to-kangana-ranaut-uniform-would-be-bad-idea-3738561

https://twitter.com/uorfi_/status/1620110194759077888?ref_src=twsrc%5Etfw%7Ctwcamp%5Etweetembed%7Ctwterm%5E1620110194759077888%7Ctwgr%5E3e55e5fdabbe2746bb0fd35a6219bfebdd9e7b19%7Ctwcon%5Es1_&ref_url=https%3A%2F%2Fwww.ndtv.com%2Foffbeat%2Fshah-rukh-khans-pathaan-release-actor-uorfi-javed-quips-to-kangana-ranaut-uniform-would-be-bad-idea-3738561

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read