ಕಾಲೇಜ್ ಗೋಡೆ ಮೇಲೆ ಅಶ್ಲೀಲ ಬರಹ ಕೇಸ್: ಫೋಟೋ ಹರಿಬಿಟ್ಟು ಬಾಲಕಿಯರ ಜೀವನಕ್ಕೆ ಕುತ್ತು ತಂದಿದ್ದ ಆರೋಪಿ ಅರೆಸ್ಟ್

ಕೊಪ್ಪಳ: ಕಾಲೇಜಿನ ಗೋಡೆ ಮೇಲೆ ಅಶ್ಲೀಲ ಬರಹ ಪ್ರಕರಣದ ಆರೋಪಿಯನ್ನು ಬಂಧಿಸಲಾಗಿದೆ. 27 ವರ್ಷದ ಮೆಹಬೂಬ್ ಹಸನ್ ಸಾಬ್ ಸಿಕಲಗಾರ ಬಂಧಿತ ಆರೋಪಿ ಎಂದು ಹೇಳಲಾಗಿದೆ.

ಕೊಪ್ಪಳ ಜಿಲ್ಲೆಯ ಕನಕಗಿರಿ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಕಳೆದ ಎರಡು ವರ್ಷದಿಂದ ಹಸನ್ ಸಾಬ್ ಸಿಕಲಗಾರ ಅಪ್ರಾಪ್ತೆಯನ್ನು ಪ್ರೀತಿಸುತ್ತಿದ್ದ. ಆತನ ಜೊತೆಗೆ ಮೊದಲು ಚೆನ್ನಾಗಿಯೇ ಮಾತನಾಡುತ್ತಿದ್ದ ಬಾಲಕಿ ಗೆ ಬೇರೆಯವನ ಜೊತೆ ಮದುವೆ ನಿಶ್ಚಯವಾಗಿದ್ದಕ್ಕೆ ಆಕ್ರೋಶಗೊಂಡಿದ್ದ. ಆಕೆ ತನ್ನಿಂದ ದೂರವಾಗುತ್ತಾಳೆ ಎಂಬ ದುರುದ್ದೇಶದಿಂದ ಅಶ್ಲೀಲ ಬರಹ ಬರೆದಿದ್ದ.

ಆಕೆಯನ್ನು ಯಾರೂ ಮದುವೆಯಾಗಬಾರದು ಎಂದು ಗೋಡೆ ಬರಹ ಬರೆದಿದ್ದ. ಒಳ್ಳೆಯವನಂತೆ ನಟಿಸುತ್ತಿದ್ದ ಹಸನ್ ಸಾಬ್ ಸಿಕಲಗಾರ ಯಾರಿಗೂ ಅನುಮಾನ ಬರದಂತೆ ನಡೆದುಕೊಳ್ಳುತ್ತಿದ್ದ. ಟೆಕ್ನಿಕಲ್ ಎವಿಡೆನ್ಸ್ ನಲ್ಲಿ ಮೆಹಬೂಬ್ ಸಾಬ್ ಸಿಕ್ಕಿಬಿದ್ದಿದ್ದಾನೆ.

ನಕಲಿ ಇನ್ಸ್ಟಾಗ್ರಾಮ್ ಐಡಿ ಬಳಸಿ ಅಶ್ಲೀಲ ಫೋಟೋ, ಬರಹ ಹರಿಬಿಡುತ್ತಿದ್ದ. ಕನಕಗಿರಿಯ ಜೂನಿಯರ್ ಕಾಲೇಜಿನಲ್ಲಿ ಗೋಡೆ ಬರಹ ಬರೆಯುತ್ತಿದ್ದ. ಹಲವು ತಿಂಗಳಿನಿಂದ ಆತ ಅಶ್ಲೀಲ ಬರಹ ಬರೆಯುತ್ತಿದ್ದು, ಹಲವು ಬಾಲಕಿಯರ ವಿದ್ಯಾರ್ಥಿ ಜೀವನಕ್ಕೆ ಕುತ್ತು ತಂದಿದ್ದ. ವಿಕೃತಿ ಮೆರೆಯುತ್ತಿದ್ದ ಹಸನ್ ಸಾಬ್ ನನ್ನು ಕನಕಗಿರಿ ಪೊಲೀಸರು ಬಂಧಿಸಿದ್ದಾರೆ ಎಂದು ಕೊಪ್ಪಳ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ ಅವರು ಹೇಳಿಕೆ ನೀಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read