ಮುಂಬೈ: ಚೆಂಬೂರ್ ಉಪನಗರದಲ್ಲಿರುವ ದೇವಾಲಯವೊಂದರಲ್ಲಿ ಹಿಂದೂ ದೇವತೆ ಕಾಳಿ ಮಾತೆಯ ಮೂರ್ತಿಗೆ ಕ್ರಿಶ್ಚಿಯನ್ ಶೈಲಿಯಲ್ಲಿ ಮದರ್ ಮೇರಿಯ ವೇಷ ಹಾಕಿ ಅಲಂಕಾರ ಮಾಡಿದ್ದು, ಇದನ್ನು ಕಂಡ ಭಕ್ತರು ಾಕ್ರೋಶ ವ್ಯಕ್ತಪಡಿಸಿದ್ದಾರೆ.
ಇದರಿಂದ ಮುಂಬೈನಲ್ಲಿ ದೊಡ್ಡ ವಿವಾದ ಭುಗಿಲೆದ್ದು, ಪ್ರತಿಭಟನೆಗಳಿಗೆ ಕಾರಣವಾಗಿದ್ದು, ದೇವಾಲಯದ ಅರ್ಚಕನನ್ನು ಬಂಧಿಸಲಾಗಿದೆ.
ಆರ್ಸಿಎಫ್ ಪೊಲೀಸ್ ಠಾಣೆಯ ಪ್ರಕಾರ, ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾದ ವೀಡಿಯೊದಲ್ಲಿ ಕ್ರಿಶ್ಚಿಯನ್ ಶೈಲಿಯ ಉಡುಪಿನಲ್ಲಿ ಅಲಂಕರಿಸಲ್ಪಟ್ಟ ಕಾಳಿ ಮಾತೆಯ ಮೂರ್ತಿಯನ್ನು ತೋರಿಸಲಾಗಿದೆ. ಭಾನುವಾರ ದೇವಾಲಯಕ್ಕೆ ಭೇಟಿ ನೀಡಿದ ಭಕ್ತರು ದೇವರ ಬದಲಾದ ನೋಟವನ್ನು ನೋಡಿ ಆಘಾತಕ್ಕೊಳಗಾದರು. ಅವರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದರು, ಈ ಕೃತ್ಯವು ಅವರ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದೆ ಎಂದು ಆರೋಪಿಸಿದ್ದಾರೆ.
ದೇವಿಯು ಕನಸಿನಲ್ಲಿ ಕಾಣಿಸಿಕೊಂಡಳು ಮತ್ತು “ಅವಳನ್ನು ಮೇರಿಯ ರೂಪದಲ್ಲಿ ಅಲಂಕರಿಸು” ಎಂದು ಸೂಚಿಸಿದಳು. ಹೀಗಾಗಿ ಅದೇ ರೀತಿ ಅಲಂಕರಿಸಿದ್ದೇನೆ ಎಂದು ಅರ್ಚಕ ರಮೇಶ್ ಭಕ್ತರಿಗೆ ತಿಳಿಸಿದ್ದಾನೆ. ಸ್ಥಳೀಯ ಭಕ್ತರು ಮತ್ತು ಸಂಘಟನೆಗಳು ಈ ಹೇಳಿಕೆಯನ್ನು ನಿರಾಕರಿಸಿದ್ದು, ಇದನ್ನು ನಂಬಿಕೆಯ ಮೇಲಿನ ದಾಳಿ ಎಂದು ಕರೆದಿದ್ದಾರೆ.
ಧಾರ್ಮಿಕ ಭಾವನೆಗಳನ್ನು ಕೆರಳಿಸಿದ್ದಕ್ಕಾಗಿ ಭಾರತೀಯ ನ್ಯಾಯ ಸಂಹಿತಾ (ಬಿಎನ್ಎಸ್) ನ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿ ಅರ್ಚಕನನ್ನು ಬಂಧಿಸಿದ್ದಾರೆ. ನಂತರ ಸ್ಥಳೀಯ ನ್ಯಾಯಾಲಯವು ಅವರನ್ನು ಎರಡು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.
Reportedly, one old Kali Mata murti in Mumbai Chembur’s Mysore Colony Shamshan Bhoomi was repainted into Mother Mary.
— BhikuMhatre (@MumbaichaDon) November 25, 2025
This isn’t creativity—it’s disrespect.
Faiths can coexist, but replacing one with another crosses every line😡
Ironically, Priest himself is involved in this.… pic.twitter.com/DobxrivmPu
