ಸೆಪ್ಟೆಂಬರ್ 13ರಂದು ತೆರೆಕಂಡಿದ್ದ ವಿಕ್ಕಿ ವರುಣ್ ನಟಿಸಿ ನಿರ್ದೇಶಿಸಿರುವ ‘ಕಾಲಾಪತ್ಥರ್’ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಧೂಳ್ ಎಬ್ಬಿಸಿದ್ದು, ಪ್ರೇಕ್ಷಕರ ಫೇವರೆಟ್ ಆಗಿದೆ. ವಿಕ್ಕಿ ವರುಣ್ ಅವರ ಅದ್ಭುತ ನಟನೆಗೆ ಪ್ರೇಕ್ಷಕ ಪ್ರಭುಗಳು ಫಿದಾ ಆಗಿದ್ದು, ವಿಕ್ಕಿ ಕೆರಿಯರ್ ನಲ್ಲಿ ಇದೊಂದು ದೊಡ್ಡ ಯಶಸ್ಸು ತಂದುಕೊಟ್ಟ ಸಿನಿಮಾವಾಗಿದೆ.
ಈ ಚಿತ್ರವನ್ನು ಭುವನ್ ಮೂವೀಸ್ ಬ್ಯಾನರ್ ನಲ್ಲಿ ಸುರೇಶ್ – ನಾಗರಾಜು ನಿರ್ಮಾಣ ಮಾಡಿದ್ದು, ವಿಕ್ಕಿ ವರುಣ್ ಗೆ ಜೋಡಿಯಾಗಿ ಧನ್ಯ ರಾಮ್ ಕುಮಾರ್ ಅಭಿನಯಿಸಿದ್ದಾರೆ. ನಾಗಾಭರಣ, ಅಚ್ಯುತ್ ಕುಮಾರ್ ಸಂಪತ್ ರಾಜೇಶ್ ನಟರಂಗ, ಗಲ್ಲಿ ನಟ, ಬಸು ಹಿರೇಮಠ, ಕಾಂತರಾಜ್ ಕಡ್ಡಿಪುಡಿ ಉಳಿದ ಪಾತ್ರ ವರ್ಗದಲ್ಲಿದ್ದಾರೆ.
ಅನೂಪ್ ಸೀಳಿನ್ ಸಂಗೀತ ಸಂಯೋಜನೆ ನೀಡಿದ್ದು, ದೀಪು ಎಸ್ ಕುಮಾರ್ ಸಂಕಲನ, ಸಂದೀಪ್ ಕುಮಾರ್ ಛಾಯಾಗ್ರಾಹಣ, ವಿಕ್ರಮ್ ಮೋರ್ ಹಾಗೂ ಮಾಸ್ ಮಾದ ಅವರ ಸಾಹಸ ನಿರ್ದೇಶನವಿದೆ.