ಕಲಬುರಗಿ: ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕು ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದ ಲೋಕಾಯುಕ್ತ ಎಸ್ ಪಿ ಸಿದ್ದರಾಜು ಆಸ್ಪತ್ರೆ ಸಿಬ್ಬಂದಿಗಳ ಹುಚ್ಚಾಟ ಕಂಡು ದಂಗಾದ ಘಟನೆ ನಡೆದಿದೆ.
ಜೇವರ್ಗಿ ತಾಲೂಕು ಆಸ್ಪತ್ರೆಗೆ ಭೇಟಿ ನೀಡಿದ ಲೋಕಾಯುಕ್ತ ಎಸ್ ಪಿ ಸಿದ್ದರಾಜು, ಆಸ್ಪತ್ರೆಯಲ್ಲಿನ ಅವ್ಯವಸ್ಥೆಗಳನ್ನು ಕಂಡು ವೈದ್ಯಾಧಿಕಾರಿಗಳು, ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇದೇ ವೇಳೆ ಆಸ್ಪತ್ರೆಯ ದಾಖಲಾತಿ ಪುಸ್ತಕ ಪರಿಶೀಲನೆ ನಡೆಸಿದ ಎಸ್ ಪಿ, ದಾಖಲಾತಿ ಪುಸ್ತಕದಲ್ಲಿ ಸಿನಿಮಾ ಹಾಡು ಬರೆದಿರುವುದನ್ನು ಕಂಡು ಶಾಕ್ ಆಗಿದ್ದಾರೆ.
ಆಸ್ಪತ್ರೆಯ ದಾಖಲಾತಿ ಪುಸ್ತಕದಲ್ಲಿ ಸಿಬ್ಬಂದಿಗಳು, ‘ಪೂಜಿಸಲೆಂದೆ ಹೂಗಳ ತಂದೆ, ದರುಶನ ಕೋರಿ ನಾನಿಂದೆ…’ಎಂಬ ಸಿನಿಮಾ ಹಾಡನ್ನು ಬರೆದಿದ್ದಾರೆ. ಇಡೀ ಹಾಡನ್ನು ದಾಖಲಾತಿ ಪುಸ್ತಕದಲ್ಲಿ ಬರೆದು ಹುಚ್ಚಾಟ ಮೆರೆಯಲಾಗಿದೆ. ಇದನ್ನು ಕಂಡ ಎಸ್ ಪಿ ಸಿದ್ದರಾಜು ಸಿಬ್ಬಂದಿಗಳ, ಅಧಿಕಾರಿಗಳ ಬೇಜವಾಬ್ದಾರಿಗೆ ಕೆಂಡ ಕಾರಿದ್ದಾರೆ. ಶಿಸ್ತು ಕ್ರಮದ ಎಚ್ಚರಿಕೆ ನೀಡ್ದಿದ್ದಾರೆ. ಮಾಜಿ ಸಿಎಂ ಧರಮ್ ಸಿಂಗ್ ಕ್ಷೇತ್ರದ ಆಸ್ಪತ್ರೆನಾ? ಎಂದು ಗುಡುಗಿದ್ದಾರೆ.