ಕಲಬುರಗಿ: ಪತ್ನಿಯನ್ನು ಮನೆಗೆ ಬಾ ಎಂದು ಕರೆದಿದ್ದಕ್ಕೆ ಆಕೆಯ ಸಹೋದರ ಭಾವನಿಗೆ ಚಾಕು ಇರಿದಿರುವ ಘಟನೆ ಕಲಬುರಗಿ ಜಿಲ್ಲೆಯ ಗಾಜಿಪುರದಲ್ಲಿ ನಡೆದಿದೆ.
ಆನಂದ್ ಹಲ್ಲೆಗೊಳಗಾದ ವ್ಯಕ್ತಿ. ಆನಂದ್ ಎರಡು ವರ್ಷಗಳ ಹಿಂದೆ ಸ್ನೇಹಾ ಎಂಬುವವಳನ್ನು ಪ್ರೀತಿಸಿ ವಿವಾಹವಾಗಿದ್ದ. ಮದುವೆ ಬಳಿಕ ಪತಿ-ಪತ್ನಿ ನಡುವೆ ಜಗಳವಾಗಿ ಪತ್ನಿ ತವರು ಮನೆ ಸೇರಿದ್ದಾಳೆ. ಆನಂದ್ ತನ್ನ ಅಣ್ಣನ ಮದುವೆ ಕಾರಣಕ್ಕೆ ಪತ್ನಿಯನ್ನು ಮನೆಗೆ ಬರುವಂತೆ ಕರೆದಿದ್ದಾನೆ. ಇದೇ ವಿಚಾರವಾಗಿ ಸ್ನೇಹಾ ಸಹೋದರ ಟೋನಿ ಹಾಗೂ ಆತನ ಸ್ನೇಹಿತರು ಭಾವ ಆನಮ್ದ್ ಗೆ ಚಾಕುವಿನಿಂದ ಇರಿದಿದ್ದಾರೆ.
ಗಂಭೀರವಾಗಿ ಗಾಯಗೊಂಡಿರುವ ಆನಂದ್ ನನ್ನು ಕಲಬುರಗಿಯ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಬ್ರಹ್ಮಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.