ಕಲಬುರಗಿ: ಕಲಬುರಗಿ ಜಿಮ್ಸ್ ಆಸ್ಪತ್ರೆಯ ಮತ್ತೊಂದು ಎಡವಟ್ಟು ಬೆಳಕಿಗೆ ಬಂದಿದೆ. ಐಸಿಯುನಲ್ಲಿದ್ದ ರೋಗಿಯ ಗ್ಲುಕೋಸ್ ಪೈಪ್ ಕಳಚಿ ತೀವ್ರ ರಕ್ತಸ್ರಾವದಿಂದ ರೋಗಿ ಸ್ಥಿತಿ ಚಿಂತಾಜನಕವಾಗಿರುವ ಘಟನೆ ನಡೆದಿದೆ.
ಸಿದ್ದಣ್ಣ ಎಂಬುವವರು ಜಿಮ್ಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಈ ವೇಳೆ ಅವರಿಗೆ ನೀಡಲಗಿದ್ದ ಗ್ಲುಕೋಸ್ ಪೈಪ್ ಕಳಚಿ ರಕ್ತಸ್ರಾವವಾಗಿದೆ. ವೈದ್ಯರು, ವೈದ್ಯಕೀಯ ಸಿಬ್ಬಂದಿಗಳ ಬೇಜವಾಬ್ದಾರಿಗೆ ರೋಗಿ ಸ್ಥಿತಿ ಮತ್ತಷ್ಟು ಗಂಭೀರವಾಗಿದೆ.
ಕಲಬುರಗಿಯ ಮೇಳಕುಂದಾ ಗ್ರಾಮದ ನಿವಾಸಿ ಸಿದ್ದಣ್ಣ, ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಕಳೆದ ನಾಲ್ಕು ದಿನಗಳಿಂದ ಅವರನ್ನು ಜಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ವೇಳೆ ಐಸಿಯುನಲ್ಲಿ ಚಿಕಿತ್ಸೆ ನೀಡುತ್ತಿದ್ದಾಗ ಈ ಘಟನೆ ನಡೆದಿದೆ. ಇದೀಗ ಸಿದ್ದಣ್ಣ ಸ್ಥಿತಿ ಗಂಭೀರಾವಾಗಿದೆ. ಈ ಬಗ್ಗೆ ಕುಟುಂಬ ಪ್ರಶ್ನೆ ಮಾಡಿದ್ದಕ್ಕೆ ವೈದ್ಯರು ತಡರಾತ್ರಿ ಸಿದ್ದಣ್ಣ ಅವರಿಗೆ ಹೃದಯಾಘಾತವಾಗಿದೆ ಎಂದು ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ.