ಡೆಹ್ರಾಡೂನ್: ಜೂನ್ 30 ರಿಂದ ಕೈಲಾಸ ಮಾನಸ ಸರೋವರ ಯಾತ್ರೆ ಪುನರಾರಂಭವಾಗಲಿದೆ. ಐದು ವರ್ಷಗಳ ಯಾತ್ರೆ ನಂತರ ಯಾತ್ರೆ ಆರಂಭವಾಗಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಕೊರೋನಾ ಸಾಂಕ್ರಾಮಿಕ, ಭಾರತ- ಚೀನಾ ಸಂಘರ್ಷದ ಕಾರಣದಿಂದ ನಿಂತು ಹೋಗಿದ್ದ ಕೈಲಾಸ ಮಾನಸ ಸರೋವರ ಯಾತ್ರೆ ಜೂನ್ 30 ರಿಂದ ಆರಂಭವಾಗಲಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.
ಒಟ್ಟು 250 ಜನರು 5 ಗುಂಪುಗಳಲ್ಲಿ ಕೈಲಾಸ ಮಾನಸ ಸರೋವರ ಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ. ಒಂದು ಗುಂಪಿನಲ್ಲಿ ಒಟ್ಟು 50 ಜನರು ಇರುತ್ತಾರೆ. ದೆಹಲಿಯಿಂದ ಯಾತ್ರೆ ಆರಂಭವಾಗಲಿದ್ದು, ಉತ್ತರಖಂಡದ ಪಿತ್ತೋರಗಢ ಜಿಲ್ಲೆಯ ಮೂಲಕ ಲಿಪುಲೇಕ್ ಪಾಸ್ ಮಾರ್ಗವಾಗಿ ಚೀನಾ ಪ್ರವೇಶಿಸಲಿದೆ. ಈ ಯಾತ್ರೆ ಜೂನ್ 30 ರಿಂದ ಆರಂಭವಾಗಲಿದೆ.
ಸೋಮವಾರ ಬಿಡುಗಡೆಯಾದ ಅಧಿಕೃತ ಹೇಳಿಕೆಯ ಪ್ರಕಾರ, ಐದು ವರ್ಷಗಳ ವಿರಾಮದ ನಂತರ ಜೂನ್ 30 ರಂದು ಕೈಲಾಸ ಮಾನಸ ಸರೋವರ ಯಾತ್ರೆ ಪುನರಾರಂಭಗೊಳ್ಳಲಿದೆ. ಉತ್ತರಾಖಂಡದ ಪಿಥೋರಗಢ ಜಿಲ್ಲೆಯಲ್ಲಿ 17,000 ಅಡಿ ಎತ್ತರದಲ್ಲಿರುವ ಲಿಪುಲೇಖ್ ಪಾಸ್ ಮೂಲಕ ಯಾತ್ರೆ ನಡೆಯಲಿದೆ. COVID-19 ಸಾಂಕ್ರಾಮಿಕ ರೋಗದಿಂದಾಗಿ 2020 ರಲ್ಲಿ ವಾರ್ಷಿಕ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿತ್ತು. ಈ ವರ್ಷ ಯಾತ್ರೆ ನಡೆಯಲಿದೆ.
ಉತ್ತರಾಖಂಡ ಸರ್ಕಾರ ಮತ್ತು ವಿದೇಶಾಂಗ ಸಚಿವಾಲಯ ಜಂಟಿಯಾಗಿ ಆಯೋಜಿಸಿದ್ದ ಯಾತ್ರೆಗೆ ಸಂಬಂಧಿಸಿದ ಸಭೆ ಸೋಮವಾರ ನವದೆಹಲಿಯಲ್ಲಿ ನಡೆಯಿತು. ಚರ್ಚೆಯ ಸಮಯದಲ್ಲಿ, ಯಾತ್ರೆಯನ್ನು ಆಯೋಜಿಸುವ ಜವಾಬ್ದಾರಿಯನ್ನು ಕುಮಾವೂನ್ ಮಂಡಲ್ ವಿಕಾಸ್ ನಿಗಮಕ್ಕೆ ವಹಿಸಲಾಗಿದೆ ಎಂದು ತಿಳಿಸಲಾಗಿದೆ.