ಲೈಂಗಿಕತೆಗೆ ತನ್ನ ಸ್ನೇಹಿತೆಯರನ್ನು ಕಳಿಸುವಂತೆ ಅತ್ಯಾಚಾರ ಸಂತ್ರಸ್ತೆ ಜೊತೆ ಅಸಭ್ಯವಾಗಿ ಬೇಡಿಕೆಯಿಟ್ಟು ಮಾತನಾಡುತ್ತಿದ್ದ ಪೊಲೀಸ್ ಇನ್ಸ್ ಪೆಕ್ಟರ್ ನನ್ನು ಉತ್ತರ ಪ್ರದೇಶದ ಬಿಜ್ನೋರ್‌ನಲ್ಲಿ ಅಮಾನತು ಮಾಡಲಾಗಿದೆ. ಪೊಲೀಸ್ ಇನ್ಸ್ ಪೆಕ್ಟರ್ ಸಂತ್ರಸ್ತೆಯೊಂದಿಗೆ ಮಾತನಾಡಿದ ಆಡಿಯೋ ವೈರಲ್ ಆಗಿದ್ದು ಸಾರ್ವಜನಿಕರಿಂದ ಭಾರೀ ಖಂಡನೆ ವ್ಯಕ್ತವಾಗಿದೆ.
ಸಂತ್ರಸ್ತೆ ಜೊತೆ ಧರ್ಮೇಂದರ್ ಗೌತಮ್ ಎಂಬ ಆರೋಪಿತ ಇನ್ಸ್ ಪೆಕ್ಟರ್ ಮಾತನಾಡುತ್ತಿರುವ ವಿಡಿಯೋ ಹೊರಬಿದ್ದಿದೆ. ವೀಡಿಯೊದಲ್ಲಿನ ಸಂಭಾಷಣೆಯಲ್ಲಿ ಇನ್ಸ್ ಪೆಕ್ಟರ್ , ನೀನು ಯಾವಾಗ ಬರ್ತೀ? ಬರುವಾಗ ಯಾರನ್ನಾದ್ರೂ ಕರ್ಕೊಂಡು ಬರ್ತೀಯಾ? ಕನಿಷ್ಠ ಪಕ್ಷ ಇಲ್ಲಿ ಯಾರನ್ನಾದರೂ ಹುಡುಕು. ನಾನು ನಿನಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ಮಾಡುತ್ತೇನೆ. ಬದಲಾಗಿ ನೀನು ನನಗೆ ಈ ರೀತಿ ಸಹಾಯ ಮಾಡುತ್ತಿರು ಎಂದು ಬೇಡಿಕೆ ಇಟ್ಟಿದ್ದಾನೆ. ಸಂತ್ರಸ್ತೆ ನನಗೆ ಜಾಲುವಿನಲ್ಲಿ ಯಾರೂ ಗೊತ್ತಿಲ್ಲ, ನನ್ನ ಸ್ನೇಹಿತೆಯರೆಲ್ಲಾ ಮದುವೆಯಾಗಿದ್ದಾರೆ ಎಂದು ಹೇಳುತ್ತಾರೆ . ಆದರೂ ಲಜ್ಜೆಗೆಟ್ಟ ಇನ್ಸ್ ಪೆಕ್ಟರ್, ನೀನು ಪೊಲೀಸ್ ಠಾಣೆಗೆ ಭೇಟಿ ನೀಡಿದಾಗಲೆಲ್ಲಾ ನಿನ್ನೊಂದಿಗೆ ನಿನ್ನ ಸ್ನೇಹಿತೆಯನ್ನು ಕರೆದುಕೊಂಡು ಬಾ ಎಂದು ಒತ್ತಾಯಿಸಿದ್ದಾನೆ.
ಈ ವರ್ತನೆ ಬಗ್ಗೆ ತಿಳಿದು ಆಡಿಯೊ ರೆಕಾರ್ಡಿಂಗ್ ಅನ್ನು ಪರಿಶೀಲಿಸಿದ ನಂತರ ಇನ್ಸ್ ಪೆಕ್ಟರ್ ಅನ್ನು ಅಮಾನತುಗೊಳಿಸಲಾಗಿದೆ ಮತ್ತು ಪ್ರಕರಣದಲ್ಲಿ ಅವನ ವಿರುದ್ಧ ಆಂತರಿಕ ತನಿಖೆಗೆ ಆದೇಶಿಸಲಾಗಿದೆ ಎಂದು ಬಿಜ್ನೋರ್ ಪೊಲೀಸರು ತಿಳಿಸಿದ್ದಾರೆ.
https://twitter.com/bijnorpolice/status/1715272610777629100?ref_src=twsrc%5Etfw%7Ctwcamp%5Etweetembed%7Ctwterm%5E1715272610777629100%7Ctwgr%5E7014e75221c99b93c3a1a273c0b315d01410b3ec%7Ctwcon%5Es1_&ref_url=https%3A%2F%2Fwww.freepressjournal.in%2Findia%2Fkab-aa-rahi-ho-koi-dost-leke-aaogi-shocking-audio-clip-of-up-cop-demanding-sexual-favours-from-rape-survivor-surfaces