ಬೆಂಗಳೂರು : ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆಯು ನ.2ರಂದು ನಡೆಯಲಿದ್ದು, ಇದಕ್ಕೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆ.28ರಿಂದ ಆರಂಭಗೊಳ್ಳಲಿದೆ.
ಅರ್ಜಿ ಸಲ್ಲಿಸಲು ಸೆ.18 ಕೊನೆಯ ದಿನವಾಗಿದ್ದು, ಅರ್ಜಿ ಶುಲ್ಕ ಪಾವತಿಗೆ ಸೆ.19ರವರೆಗೆ ಅವಕಾಶವಿರುತ್ತದೆ. ಅ.24ರಂದು ಪ್ರವೇಶ ಪತ್ರ (ಹಾಲ್ ಟಿಕೆಟ್) ಬಿಡುಗಡೆಯಾಗಲಿದೆ. ಆನ್ ಲೈನ್ ಮೂಲಕ ಮಾತ್ರವೇ ಅರ್ಜಿ ಸಲ್ಲಿಸಬಹುದಾಗಿದ್ದು, ಇತರ ಯಾವುದೇ ವಿಧದಲ್ಲಿ ಅರ್ಜಿ ಸ್ವೀಕರಿಸುವುದಿಲ್ಲ. #KeanuReeves ವೆಬ್ ಸೈಟ್ https://cetonline.karnataka.gov.in/kea/ ಅನ್ನು ಪ್ರವೇಶಿಸುವ ಮೂಲಕ ಆನ್ಲೈನ್ ಅರ್ಜಿ ಸಲ್ಲಿಸಬಹುದು. ಒಟ್ಟು 33 ವಿಷಯಗಳಿಗೆ ಪರೀಕ್ಷೆ ನಡೆಯಲಿದೆ.
ಅಭ್ಯರ್ಥಿಗಳು ಕೆಸೆಟ್-2025ಕ್ಕೆ ಆನ್ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬಹುದು. ಯಾವುದೇ ಇತರ ನಮೂನೆಯಲ್ಲಿ ಅರ್ಜಿಯನ್ನು https://cetonline.karnataka.gov.in/kea/ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿಯನ್ನು ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಈ ಅಧಿಸೂಚನೆಯನ್ನು ಗಮನವಿಟ್ಟು ಓದಿ ನಂತರ ಅರ್ಜಿಯನ್ನು ಭರ್ತಿಮಾಡಬೇಕು.
ಕೆಸೆಟ್ (KSET) 2025ರ ಪರೀಕ್ಷೆಯನ್ನು 33 ವಿಷಯಗಳಲ್ಲಿ ನಡೆಸಲಾಗುತ್ತಿದ್ದು, ಪರೀಕ್ಷಾ ಕೇಂದ್ರಗಳ ವಿವರಗಳನ್ನು ಪುಟ ಸಂಖ್ಯೆ: 7 ಮತ್ತು 8 ರಲ್ಲಿ ನೀಡಲಾಗಿದೆ.ಈ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳು, ಕರ್ನಾಟಕ ರಾಜ್ಯದ ಯಾವುದೇ ವಿಶ್ವವಿದ್ಯಾನಿಲಯ / ಪ್ರಥಮ ದರ್ಜೆ ಪದವಿ ಕಾಲೇಜು / ಉನ್ನತ ಶಿಕ್ಷಣ ಸಂಸ್ಥೆ (ಸರ್ಕಾರಿ, ಅನುದಾನಿತ ಮತ್ತು ಖಾಸಗಿ) ಗಳಲ್ಲಿ ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ ನೇಮಕಗೊಳ್ಳಲು ಅರ್ಹರಾಗಿರುತ್ತಾರೆ ಹಾಗೂ ಆಯಾ ಸಂಸ್ಥೆಗಳ ನಿಯಮ ಮತ್ತು ಕಾಯ್ದೆಗಳಿಗೆ ಒಳಪಟ್ಟಿರುತ್ತಾರೆ.
ವಿಕಲಚೇತನ (PwD), ತೃತೀಯ ಲಿಂಗ, ಪರಿಶಿಷ್ಟ ಜಾತಿ (SC), ಪರಿಶಿಷ್ಟ ಪಂಗಡ (ST), ಮತ್ತು ಇತರೆ ಹಿಂದುಳಿದ ವರ್ಗದ (ಪ್ರವರ್ಗ-I, IIA, IIB, IIIA, ಮತ್ತು IIIB) ಅಭ್ಯರ್ಥಿಗಳು, ಕರ್ನಾಟಕ ಸರ್ಕಾರದ ಹಿಂದುಳಿದ ವರ್ಗದವರ https://bcwd.karnataka.gov.in/2.
1) ಅರ್ಹತಾ ನಿಬಂಧನೆಗಳು :
1) ಅಭ್ಯರ್ಥಿಗಳು ಯು.ಜಿ.ಸಿ ಯಿಂದ ಮಾನ್ಯತೆ ಪಡೆದಿರುವ ವಿಶ್ವವಿದ್ಯಾನಿಲಯ / ಉನ್ನತ ಶಿಕ್ಷಣ ಸಂಸ್ಥೆಯಿಂದ ಸ್ನಾತಕೋತ್ತರ ಪದವಿ ಅಥವಾ ಸಮಾನವಾದ ಪರೀಕ್ಷೆಗಳಲ್ಲಿ ಸಾಮಾನ್ಯ ವರ್ಗದ ಅಭ್ಯರ್ಥಿಗಳು ಶೇ.55% ರಷ್ಟು ಅಂಕಗಳನ್ನು (ಪೂರ್ಣಾಂಕಿತ ಗೊಳಿಸಿರಬಾರದು) ಪಡೆದಿರಬೇಕು. ಪರಿಶಿಷ್ಟ ಜಾತಿ (SC), ಪರಿಶಿಷ್ಟ ಪಂಗಡ (ST). ಇತರೆ ಹಿಂದುಳಿದ ಅಭ್ಯರ್ಥಿಗಳು (ಪ್ರವರ್ಗ-1, IIA, IIB, IIIA, IIIB), ವಿಶೇಷಚೇತನರು (PwD) ಮತ್ತು ತೃತೀಯ ಲಿಂಗ ಗುಂಪಿಗೆ ಸೇರಿದ ಅಭ್ಯರ್ಥಿಗಳು ಶೇ.50% ರಷ್ಟು (ಪೂರ್ಣಾಂಕಿತ ಗೊಳಿಸಿರಬಾರದು) ಅಂಕಗಳನ್ನು ಪಡೆದಿರಬೇಕು.
2) ಸ್ನಾತಕೋತ್ತರ ಪದವಿ ಪಡೆದವರು ಹಾಗೂ ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ (ಪ್ರಥಮ ಮತ್ತು ದ್ವಿತೀಯ) ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಕೆಸೆಟ್ ಪರೀಕ್ಷೆಯನ್ನು ತೆಗೆದುಕೊಳ್ಳಲು ಅರ್ಹರಾಗಿರುತ್ತಾರೆ. ಆದರೆ, ಪ್ರಸ್ತುತ ವ್ಯಾಸಾಂಗ ಮಾಡುತ್ತಿರುವ ಅಭ್ಯರ್ಥಿಗಳಿಗೆ ಪರೀಕ್ಷೆ ತೆಗೆದುಕೊಳ್ಳಲು ತಾತ್ಕಾಲಿಕವಾಗಿ ಮಾತ್ರ ಪ್ರವೇಶ ನೀಡಲಾಗುವುದು. ಅವರು ಸ್ನಾತಕೋತ್ತರ ಪದವಿ ಅಥವಾ ಸಮಾನವಾದ ಪರೀಕ್ಷೆಯನ್ನು, ಸಾಮಾನ್ಯ ವರ್ಗದವರು ಶೇ.55% ರಷ್ಟು ಹಾಗೂ ಪರಿಶಿಷ್ಟ ಜಾತಿ (SC). ಪರಿಶಿಷ್ಟ ಪಂಗಡ (ST), ಪ್ರವರ್ಗ-I, IIA, IIB, IIIA, ಮತ್ತು IIIB, ವಿಕಲಚೇತನರು (PwD) ಮತ್ತು ತೃತೀಯ ಲಿಂಗದ ಅಭ್ಯರ್ಥಿಗಳು, ಶೇ. 50% ರಷ್ಟು ಅಂಕ ಪಡೆದು, ಅರ್ಹತೆ ಹೊಂದಿ ಕೆಸೆಟ್ ಪರೀಕ್ಷೆಯ ಫಲಿತಾಂಶ ಪ್ರಕಟಿಸಿದ ದಿನಾಂಕದಿಂದ ಎರಡು ವರ್ಷದೊಳಗಾಗಿ ಅವರಸ್ನಾತಕೋತ್ತರ ಪದವಿಯ ಅಂಕಪಟ್ಟಿಗಳನ್ನು ಸಲ್ಲಿಸಿದರೆ ಮಾತ್ರ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪ್ರಮಾಣ ಪತ್ರ ಪಡೆಯಬಹುದು. ಇಲ್ಲವಾದಲ್ಲಿ ಅಂತಹವರ ಅರ್ಹತೆಯನ್ನು ರದ್ದುಪಡಿಸಲಾಗುವುದು.
3) ಸ್ನಾತಕೋತ್ತರ ಪದವಿಯಲ್ಲಿ ಅಧ್ಯಯನ ಮಾಡಿದ ವಿಷಯದಲ್ಲಿಯೇ ಅಭ್ಯರ್ಥಿಗಳು ಕೆಸೆಟ್ (KSET) ಪರೀಕ್ಷೆಯನ್ನು ತೆಗೆದುಕೊಳ್ಳಬೇಕು. ಪ್ರಸ್ತುತ ಕೆಸೆಟ್-2025 ಅಧಿಸೂಚನೆಯಲ್ಲಿ ಇಲ್ಲದಿರುವ ವಿಷಯಗಳಿಗೆ, ಅಭ್ಯರ್ಥಿಗಳು ವರ್ಷದಲ್ಲಿ ಎರಡು ಬಾರಿ ನಡೆಯುವ ಯು.ಜಿ.ಸಿ, ಎನ್.ಇ.ಟಿ ಅಥವಾ ಯು.ಜಿ.ಸಿ-ಸಿ.ಎಸ್.ಐ.ಆರ್-ಎನ್.ಇ.ಟಿ ಪರೀಕ್ಷೆಯನ್ನು ತೆಗೆದುಕೊಳ್ಳಬಹುದು.
4) 1991ರ ಸೆಪ್ಟೆಂಬರ್ 19 ರೂಳಗೆ ಸ್ನಾತಕೋತ್ತರ ಪರೀಕ್ಷೆಯನ್ನು ಪೂರ್ಣಗೊಳಿಸಿ (ಫಲಿತಾಂಶ ಘೋಷಣೆಯ ದಿನಾಂಕವನ್ನು ಲೆಕ್ಕಿಸದೆ) ಹಾಗೂ ಪಿ.ಹೆಚ್.ಡಿ ಪದವಿ ಪಡೆದವರು ಕೆಸೆಟ್ ಪರೀಕ್ಷೆಯನ್ನು ತೆಗೆದುಕೊಳ್ಳಲು ಒಟ್ಟು ಅಂಕಗಳಲ್ಲಿ 54 ವಿನಾಯಿತಿ ಇರುತ್ತದೆ
5) ಸಾಮಾನ್ಯ ವರ್ಗದ ಅಭ್ಯರ್ಥಿಗಳನ್ನು ಹೊರತುಪಡಿಸಿ, ಮೀಸಲಾತಿಯನ್ನು ಪಡೆಯಲು ಇಚ್ಚಿಸುವ ಅಭ್ಯರ್ಥಿಗಳು ಆನ್ಲೈನ್ . SC, ST, CAT-1, IIA, IIB, IIA, IIB ಪ್ರಾಧಿಕಾರಗಳು ನೀಡುವ ಪ್ರವರ್ಗ ಪ್ರಮಾಣಪತ್ರಗಳನ್ನು ಲಗತ್ತಿಸಬೇಕು. ಈ ಅಭ್ಯರ್ಥಿಗಳ ಪ್ರಮಾಣ ಪತ್ರಗಳು ಯಾವುದೇ ಹಂತದಲ್ಲಾದರೂ, ಸುಳ್ಳು ಎಂದು ಸಾಬೀತಾದರೆ ಅವರ ಅಭ್ಯರ್ಥಿತ್ವವನ್ನು ಮುನ್ಸೂಚನೆ ಇಲ್ಲದೆ ರದ್ದುಗೊಳಿಸಲಾಗುತ್ತದೆ ಮತ್ತು ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು. ಅರ್ಜಿ ಸಲ್ಲಿಸುವಾಗ ಕಡ್ಡಾಯವಾಗಿ ಚಾಲ್ತಿಯಲ್ಲಿರುವ ಪ್ರಮಾಣ ಪತ್ರದ ರೆವಿನ್ಯೂ ಡಿವಿಜನ್ (RD) ಸಂಖ್ಯೆ ನಮೂದಿಸಬೇಕು. ನಂತರ ತಾವು ಸಲ್ಲಿಸುವ ಪ್ರಮಾಣ ಪತ್ರಗಳನ್ನು ಪರಿಗಣಿಸುವುದಿಲ್ಲ.
6) ಹೊರರಾಜ್ಯದ ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಮೀಸಲಾತಿ ಇರುವುದಿಲ್ಲ. ಅವರು ಸ್ನಾತಕೋತ್ತರ ಪರೀಕ್ಷೆಯಲ್ಲಿ ನಿಗದಿತ ಕನಿಷ್ಟ 55% ಅಥವಾ ಅದಕ್ಕಿಂತ ಹೆಚ್ಚು ಅಂಕಗಳನ್ನು ಪಡೆದಿದ್ದಲ್ಲಿ ಮಾತ್ರ ಸಾಮಾನ್ಯ ವರ್ಗದಡಿಯಲ್ಲಿ ಪ್ರವೇಶಾತಿಗೆ ನೊಂದಾಯಿಸಬಹುದು. SC/ST/OBC/Transgender/PwD SC/ST/OBC/Transgender/PwD ಅಭ್ಯರ್ಥಿಗಳಿಗೆ ಮಾತ್ರ ಅನ್ವಯವಾಗುತ್ತದೆ.
7) ಅಭ್ಯರ್ಥಿಗಳು ಮುಖ್ಯವಾಗಿ ಗಮನಿಸಬೇಕಾದ ಅಂಶವೇನೆಂದರೆ ಅವರ ಅಭ್ಯರ್ಥಿತನವು ತಾತ್ಕಾಲಿಕವೆಂದು ಭಾವಿಸಿಕೊಳ್ಳತಕ್ಕದ್ದು. ಪ್ರವೇಶಾಶಿ ಪಡೆದ ಕಾರಣಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಅವರನ್ನು ಅರ್ಹ ಅಭ್ಯರ್ಥಿಯಾಗಿ ಪರಿಗಣಿಸಿದೆ ಎಂದು ತಿಳಿಯಬಾರದು. ಅಭ್ಯರ್ಥಿಗಳ ಅರ್ಹತಾ ನಿಬಂಧನೆಗಳನ್ನು ಪರಿಶೀಲಿಸಿದ ನಂತರ ಅವರ ಅಭ್ಯರ್ಥಿತನವನ್ನು ಪರಿಗಣಿಸಲಾಗುವುದು.
8) ಈಗಾಗಲೇ ಕೆಸೆಟ್ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳು ಮುಂಬರುವ ಕೆಸೆಟ್ ಪರೀಕ್ಷೆಗೆ ಅದೇ ವಿಷಯದಲ್ಲಿ (Same Subject) ಅರ್ಜಿ ಸಲ್ಲಿಸುವಂತಿಲ್ಲ. ಕೆಸೆಟ್ ಅರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಪುನಃ ಅರ್ಜಿ ಸಲ್ಲಿಸಿದ್ದು ಕಂಡು ಬಂದ ಪಕ್ಷದಲ್ಲಿ ಅಂತಹ ಅಭ್ಯರ್ಥಿಗಳ ಅರ್ಹತೆಯನ್ನು ರದ್ದುಗೊಳಿಸಲಾಗುವುದು ಹಾಗೂ ಅವರು ಹಿಂದೆ ಪಡೆದಿರುವ ಕೆಸೆಟ್ ಪರೀಕ್ಷೆಯ ಅರ್ಹತೆಯನ್ನು ಕೂಡ ಡಿನೋಟಿಫಿಕೇಷನ್ ಮೂಲಕ ಹಿಂಪಡೆಯಲಾಗುವುದು.
9) ಭಾರತೀಯ ವಿಶ್ವವಿದ್ಯಾಲಯ / ಸಂಸ್ಥೆ ನೀಡುವ ಎರಡು ವರ್ಷದ ಸ್ನಾತಕೋತ್ತರ ಡಿಪ್ಲೊಮಾ / ಪ್ರಮಾಣಪತ್ರ ಅಥವಾ ವಿದೇಶಿ ವಿಶ್ವವಿದ್ಯಾಲಯ / ಸಂಸ್ಥೆ ನೀಡುವ ವಿದೇಶಿ ಪದವಿ / ಡಿಪ್ಲೊಮಾ ಪ್ರಮಾಣ ಪತ್ರ ಹೊಂದಿರುವ ಅಭ್ಯರ್ಥಿಗಳು ತಮ್ಮ ಹಿತದೃಷ್ಟಿಯಿಂದ ಮಾನ್ಯತೆ ಪಡೆದ ಭಾರತೀಯ ಸ್ನಾತಕೋತ್ತರ ಪದವಿಯೊಂದಿಗೆ ತಮ್ಮ ಡಿಪ್ಲೊಮಾ/ ಪದವಿ/ ಪ್ರಮಾಣಪತ್ರದ ಸಮಾನತೆಯನ್ನು (ಅಸೋಸಿಯೇಷನ್ ಆಫ್ ಇಂಡಿಯನ್ ಯೂನಿವರ್ಸಿಟೀಸ್ (ಎಐಯು) ನವದೆಹಲಿ (www.ailu,ac.in) ಯಿಂದ ಖಚಿತಪಡಿಸಿಕೊಳ್ಳಬೇಕು.
II) ವಯೋಮಿತಿ :
ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ-2025 ತೆಗೆದುಕೊಳ್ಳಲು ಗರಿಷ್ಟ ವಯೋಮಿತಿ ಇರುವುದಿಲ್ಲ.
III) వినాయతి :
ಕರ್ನಾಟಕ ರಾಜ್ಯದಲ್ಲಿ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ, ವಿಶ್ವವಿದ್ಯಾನಿಲಯ / ಪ್ರಥಮ ದರ್ಜೆ ಕಾಲೇಜುಗಳು / ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ (ಸರ್ಕಾರಿ / ಅನುದಾನಿತ / ಖಾಸಗಿ) ನೇಮಕವಾಗಬೇಕಾದರೆ, ಅಭ್ಯರ್ಥಿಗಳು ಕಡ್ಡಾಯವಾಗಿ ಕೆಸೆಟ್ ಅಥವಾ ಎನ್.ಇ.ಟಿ. ಪರೀಕ್ಷೆಯಲ್ಲಿ ಅರ್ಹತೆ ಪಡೆದಿರಬೇಕೆಂಬ ನಿಯಮವಿದೆ.
a) ಯು.ಜಿ.ಸಿ ಕಾಲಕಾಲಕ್ಕೆ ಹೊರಡಿಸುವ ನಿಬಂಧನೆಗಳು, ಯು.ಜಿ.ಸಿ ಮಾರ್ಗಸೂಚಿಗಳು ಮತ್ತು ಅಧಿನಿಯಮಗಳ ಅನ್ವಯ ಕೆಸೆಟ್ ಅರ್ಹತೆ ಪರೀಕ್ಷೆಯಿಂದ ವಿನಾಯಿತಿ ನೀಡಲಾಗುವುದು.
b) ಅಭ್ಯರ್ಥಿಯು 1989 ಕ್ಕಿಂತ ಮುಂಚಿತವಾಗಿ ಯು.ಜಿ.ಸಿ-ನೆಟ್/ಸಿ.ಎಸ್.ಐ.ಆರ್-ನೆಟ್, ಜಿ.ಆರ್.ಎಫ್ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿದ್ದಲ್ಲಿ ಅಂತಹವರಿಗೆ ಕೆಸೆಟ್ ಪರೀಕ್ಷೆಯಿಂದ ವಿನಾಯಿತಿ ನೀಡಲಾಗಿದೆ.
c) ಕೆಸೆಟ್ ಅಭ್ಯರ್ಥಿಗಳಿಗೆ 1ನೇ ಜೂನ್ 2002 ಕ್ಕಿಂತ ಮೊದಲೇ ನಡೆಸಲಾದ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದ ಅಭ್ಯರ್ಥಿಗಳಿಗೂ ಕೆಸೆಟ್ ಪರೀಕ್ಷೆಯಿಂದ ವಿನಾಯಿತಿ ನೀಡಲಾಗಿರುತ್ತದೆ. ಅಂತಹ ಅಭ್ಯರ್ಥಿಗಳು ಭಾರತದಲ್ಲಿ ಎಲ್ಲಿಯಾದರೂ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಅರ್ಹರಾಗುತ್ತಾರೆ. ಆದರೆ 01 ಜೂನ್. 2002 ರ ನಂತರ ಕೆಸೆಟ್ನಲ್ಲಿ ಅರ್ಹರಾದ ಅಭ್ಯರ್ಥಿಗಳು ಆಯಾ ರಾಜ್ಯಗಳ ವಿಶ್ವವಿದ್ಯಾನಿಲಯಗಳು / ಪ್ರಥಮ ದರ್ಜೆ ಕಾಲೇಜುಗಳಲ್ಲಿ ಮಾತ್ರ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಅರ್ಹರಾಗಿರುತ್ತಾರೆ.








#KSET-25: ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆಯು ನ.2ರಂದು ನಡೆಯಲಿದ್ದು, ಇದಕ್ಕೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆ.28ರಿಂದ ಆರಂಭಗೊಳ್ಳಲಿದೆ.
— ಕರ್ನಾಟಕ ಪರೀಕ್ಷಾ ಪ್ರಾಧಿಕಾರ KEA (@KEA_karnataka) August 22, 2025
ಅರ್ಜಿ ಸಲ್ಲಿಸಲು ಸೆ.18 ಕೊನೆಯ ದಿನವಾಗಿದ್ದು, ಅರ್ಜಿ ಶುಲ್ಕ ಪಾವತಿಗೆ ಸೆ.19ರವರೆಗೆ ಅವಕಾಶವಿರುತ್ತದೆ. ಅ.24ರಂದು ಪ್ರವೇಶ ಪತ್ರ (ಹಾಲ್ ಟಿಕೆಟ್)…