BIG NEWS: ಸಿಎಂ ಸಿದ್ದರಾಮಯ್ಯ, ಸಂಸದ ಅನಂತಕುಮಾರ್ ಹೆಗಡೆ 3-4 ದಿನ ಮೌನವಾಗಿರಿ; ಕೆ.ಎಸ್.ಈಶ್ವರಪ್ಪ ಮನವಿ

ಶಿವಮೊಗ್ಗ: ಸಿಎಂ ಸಿದ್ದರಾಮಯ್ಯನವರಾಗಲಿ ಸಂಸದ ಅನಂತ್ ಕುಮಾರ್ ಹೆಗಡೆಯವರಾಗಲಿ ಇಬ್ಬರೂ 3-4 ದಿನಗಳ ಕಾಲ ಮಾತನಾಡದೇ ಸುಮ್ಮನಿರುವಂತೆ ಮಾಜಿ ಸಚಿವ ಕೆ.ಎಸ್.ಈಸ್ವರಪ್ಪ ಮನವಿ ಮಡಿದ್ದಾರೆ.

ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆ.ಎಸ್.ಈಶ್ವರಪ್ಪ, ಅಯೋಧ್ಯೆಯಲ್ಲಿ ಜನವರಿ 22ರಂದು ರಾಮ ಮಂದಿರ ಉದ್ಘಾಟನೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಅವರ ಬೆಂಬಲಿಗರು, ಸಂಸದ ಅನಂತಕುಮಾರ್ ಹಾಗೂ ಅವರ ಬೆಂಬಲಿಗರು ರಾಮ ಮಂದಿರದ ಬಗ್ಗೆ, ಅಯೋಧ್ಯೆ ಬಗ್ಗೆ ಯಾವುದೇ ಮಾತುಗಳನ್ನು ಆಡದೇ ಮೌನವಾಗಿರಲಿ ಎಂದು ಮನವಿ ಮಾಡುತ್ತೇನೆ ಎಂದರು.

ಇಬ್ಬರೂ ಪರಸ್ಪರ ಆರೋಪ ಪ್ರತ್ಯಾರೋಪಗಳನ್ನು ಮಾಡದೇ 3-4 ದಿನಗಳ ಕಾಲ ಸುಮ್ಮನಿದ್ದರೆ ಸಾಕು. ರಾಮನ ಬಗ್ಗೆ, ಅಯೋಧ್ಯೆ ಬಗ್ಗೆ ಯಾವುದೇ ಟೀಕೆ-ಟಿಪ್ಪಣೆ ಮಾಡುವುದು ಬೇಡ. ಸಾಧ್ಯವಾದರೆ ರಾಮನಾಮ ಸ್ಮರಣೆ ಮಾಡಿ, ಗುಣಗಾನ ಮಾಡಿ ಎಂದು ಹೇಳಿದರು.

ಬಿಜೆಪಿಗೆ ಗೊತ್ತು ಅನಂತ ಕುಮರ್ ಹೆಗಡೆ ಒಬ್ಬ ದೈವ ಭಕ್ತ, ರಾಷ್ಟ್ರ ಭಕ್ತ ಎಂಬುದು. ಆದರೆ ಈ ಸಂದರ್ಭದಲ್ಲಿ ಯಾವುದೇ ರೀತಿಯ ಟೀಕೆ-ಟಿಪ್ಪಣೆಗಳು ಬೇಡ ಎಂದು ಹೇಳಿದರು.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read