ಆಂತರಿಕ ತನಿಖಾ ವರದಿ ಪ್ರಶ್ನಿಸಿ ನ್ಯಾಯಮೂರ್ತಿ ವರ್ಮಾ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದೆ.
ಲೆಕ್ಕಪತ್ರವಿಲ್ಲದ ನಗದು ಹಗರಣದಲ್ಲಿ ನ್ಯಾಯಮೂರ್ತಿ ಯಶವಂತ್ ವರ್ಮಾರನ್ನು ದೋಷಾರೋಪಣೆ ಮಾಡಿದ ಆಂತರಿಕ ತನಿಖಾ ವರದಿಯನ್ನು ಹಾಗೂ ಅವರನ್ನು ಪದಚ್ಯುತಗೊಳಿಸಲು ಭಾರತದ ಮುಖ್ಯ ನ್ಯಾಯಮೂರ್ತಿಗಳು ಮಾಡಿದ್ದ ಶಿಫಾರಸನ್ನು ಪ್ರಶ್ನಿಸಿ ಅವರು ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಸುಪ್ರೀಂ ಕೋರ್ಟ್ ಗುರುವಾರ ವಜಾಗೊಳಿಸಿದೆ.
ನ್ಯಾಯಮೂರ್ತಿಗಳಾದ ದೀಪಂಕರ್ ದತ್ತಾ ಮತ್ತು ಎ.ಜಿ. ಮಸಿಹ್ ಅವರನ್ನೊಳಗೊಂಡ ಪೀಠವು ಆಂತರಿಕ ತನಿಖಾ ಕಾರ್ಯವಿಧಾನದ ಸಿಂಧುತ್ವವನ್ನು ಎತ್ತಿಹಿಡಿದಿದ್ದು, ನ್ಯಾಯಾಧೀಶರ ನಡವಳಿಕೆ “ಪ್ರಶ್ನಾಹ್ನ” ಎಂದು ಗಮನಿಸಿದೆ.
ವಿಚಾರಣಾ ವೀಡಿಯೊವನ್ನು ಅಪ್ಲೋಡ್ ಮಾಡುವುದು ಸರಿಯಾದ ನಿರ್ಧಾರವಲ್ಲದಿದ್ದರೂ, ಸೂಕ್ತ ಸಮಯದಲ್ಲಿ ಅದನ್ನು ಪ್ರಶ್ನಿಸಲಾಗಿಲ್ಲ ಮತ್ತು ಆ ಆಧಾರದ ಮೇಲೆ ಯಾವುದೇ ಪರಿಹಾರವನ್ನು ನೀಡಲಾಗುವುದಿಲ್ಲ ಎಂದು ನ್ಯಾಯಪೀಠ ಗಮನಿಸಿತು.