BREAKING : ಕೇರಳದ ನ್ಯಾ. ಹೇಮಾ ಸಮಿತಿಯಂತೆ ಸ್ಯಾಂಡಲ್ ವುಡ್’ನಲ್ಲೂ ಕಮಿಟಿ ರಚಿಸಿ : ಸಿಎಂಗೆ ‘FIRE’ ಕಮಿಟಿ ಆಗ್ರಹ.!

ಬೆಂಗಳೂರು : ಸ್ಯಾಂಡಲ್ ವುಡ್ ನಲ್ಲಿ ಮತ್ತೆ ಕಾಸ್ಟಿಂಗ್ ಕೌಚ್ ಸದ್ದು ಮಾಡುತ್ತಿದ್ದು, ಕೇರಳ ಮಾದರಿ ತನಿಖೆಗೆ FIRE ಸಂಘಟನೆ ಆಗ್ರಹಿಸಿದೆ. ಕೇರಳದ ನ್ಯಾ. ಹೇಮಾ ಸಮಿತಿಯಂತೆ ಸ್ಯಾಂಡಲ್ವುಡ್ನಲ್ಲೂ ಕಮಿಟಿ ರಚಿಸಿ ಎಂದು ಸಿಎಂ ಸಿದ್ದರಾಮಯ್ಯಗೆ FIRE ಕಮಿಟಿ ಆಗ್ರಹಿಸಿದೆ.

ಸಿಎಂ ಸಿದ್ದರಾಮಯ್ಯ ಭೇಟಿಯಾದ FIRE ಸಂಘಟನೆ ಕೇರಳ ಮಾದರಿ ತನಿಖೆಗೆ ಆಗ್ರಹಿಸಿದೆ.ಮೀಟೂ ವಿವಾದದ ಬಳಿಕ ಮಹಿಳೆಯರ ಸಮಸ್ಯೆಗಳ ಪರಿಹಾರಕ್ಕಾಗಿ ಈ ಹಿಂದೆ ಫಿಲ್ಮ್ ಇಂಡಸ್ಟ್ರಿ ಫಾರ್ ರೈಟ್ಸ್ ಅಂಡ್ ಇಕ್ವಾಲಿಟಿ (FIRE) ರಚನೆ ಮಾಡಲಾಗಿತ್ತು. ಇದರಲ್ಲಿ ನಟ ಹಾಗೂ ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ, ನಿರ್ದೇಶಕರಾದ ಕವಿತಾ ಲಂಕೇಶ್, ಪ್ರಿಯಾಂಕಾ ಉಪೇಂದ್ರ ಸೇರಿದಂತೆ ಸಾಕಷ್ಟು ನಟಿಯರು ಸದಸ್ಯರಾಗಿದ್ದರು.

ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡ ನಟ ಚೇತನ್ ‘ ಫೈರ್ (FIRE) — ಫಿಲಂ ಇಂಡಸ್ಟ್ರಿ ಫಾರ್ ರೈಟ್ಸ್ ಅಂಡ್ ಈಕ್ವಾಲಿಟಿ –2017 ರಿಂದ ಲಿಂಗ-ಸಮಾನತೆಯ ಕನ್ನಡ ಚಲನಚಿತ್ರೋದ್ಯಮವನ್ನು ನಿರ್ಮಿಸಲು ಕೆಲಸ ಮಾಡಿದೆ. ಕನ್ನಡ ಚಲನಚಿತ್ರೋದ್ಯಮದಲ್ಲಿ ಮಹಿಳೆಯರು ಎದುರಿಸುತ್ತಿರುವ ಲೈಂಗಿಕ ಕಿರುಕುಳ ಸೇರಿದಂತೆ ಸಮಸ್ಯೆಗಳ ಬಗ್ಗೆ ಅಧ್ಯಯನ ನಡೆಸಿ ವರದಿ ನೀಡುವ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಕರ್ನಾಟಕ ಸರ್ಕಾರವು ಸಮಿತಿಯನ್ನು ರಚಿಸಬೇಕೆಂದು ಒತ್ತಾಯಿಸುವ ನಮ್ಮ ಫೈರ್ ಅರ್ಜಿಗೆ ಇಂದು ಲಿಂಗ ನ್ಯಾಯದ 153 ಪ್ರತಿಪಾದಕರು ಸಹಿ ಹಾಕಿದ್ದಾರೆ  ಎಂದು ಹೇಳಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read