ಫೆಬ್ರವರಿ 9 ಕ್ಕೆ ರಾಜ್ಯದ್ಯಂತ ಬಿಡುಗಡೆಯಾಗಲಿದೆ ‘ಜಸ್ಟ್ ಪಾಸ್’

just pass movie trailer out

ಜಸ್ಟ್ ಪಾಸ್ ಚಿತ್ರತಂಡ ಒಂದರ ಮೇಲೊಂದು ಸಿಹಿ ಸುದ್ದಿಯನ್ನು ನೀಡುತ್ತಲೇ ಇದೆ. ಜಸ್ಟ್ ಪಾಸ್ ಸಿನಿಮಾ ತನ್ನ ಟ್ರೈಲರ್ ಮೂಲಕವೇ ಸಿನಿಪ್ರೇಕ್ಷಕರ ಗಮನ ಸೆಳೆದಿದ್ದು, ಫೆಬ್ರವರಿ 9 ರಂದು ರಾಜ್ಯದಾದ್ಯಂತ ತೆರೆ ಮೇಲೆ ಬರಲು ಸಜ್ಜಾಗಿದೆ. ಈ ಕುರಿತು ಚಿತ್ರತಂಡ ಸೋಶಿಯಲ್ ಮೀಡಿಯಾದಲ್ಲಿ ಘೋಷಣೆ ಮಾಡಿದೆ.

ಈ ಚಿತ್ರದಲ್ಲಿ ಶ್ರೀ ನಾಯಕ ನಟನಾಗಿ ಅಭಿನಯಿಸಿದ್ದು, ಪ್ರಣತಿ, ರಂಗಾಯಣ ರಘು, ಸಾಧು ಕೋಕಿಲ, ಅರ್ಪಿತ, ಪ್ರಕಾಶ್, ಚಂದ್ರುಶ್ರೀ, ಗಗನ್, ಸುಚೇಂದ್ರ ಪ್ರಸಾದ್, ದೀಪಕ್, ನಿಖಿಲ್, ಡುಮ್ಮ ವಿಶ್ವಾಸ್ ಮತ್ತು ದಾನಪ್ಪ ಬಣ್ಣ ಹಚ್ಚಿದ್ದಾರೆ. ರಾಯ್ ಎಂಟರ್ಟೈನ್ಮೆಂಟ್ ಲಾಂಛನದಲ್ಲಿ ಕೆವಿ ಶಶಿಧರ್ ನಿರ್ಮಾಣ ಮಾಡಿದ್ದಾರೆ. ಕೆ ಎಂ ಪ್ರಕಾಶ್ ಸಂಕಲನ ಹಾಗೂ ಸುಜಯ್ ಕುಮಾರ್ ಬಾವಿಕಟ್ಟೆ ಛಾಯಾಗ್ರಹಣವಿದೆ. ಹರ್ಷವರ್ಧನ್ ರಾಜ್ ಸಂಗೀತ ಸಂಯೋಜನೆ ನೀಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read